ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ವಿಫಲ

ಜಗಳೂರಿನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಆರೋಪ

ಜಗಳೂರು, ಅ.2- ಕೇಂದ್ರದ ಬಿಜೆಪಿ ಸರ್ಕಾರ ಕೊರೊನಾ ಪ್ರಾಥಮಿಕವಾಗಿ ಹರ ಡುವ ವೇಳೆ ಲಾಕ್‍ಡೌನ್ ಮಾಡದೆ ನಿರ್ಲಕ್ಷ್ಯ ವಹಿಸಿ ತದನಂತರ ಏಕಾಏಕಿ ಲಾಕ್‍ಡೌನ್ ಘೋಷಿಸಿದ್ದರಿಂದ ದೇಶದ ಜನಸಾಮಾನ್ಯರು ತೀವ್ರ ತೊಂದರೆಗೊಳಗಾಗುವಂತೆ ಮಾಡಿತು ಎಂದು ಲೋಕಸಭೆ ಮಾಜಿ ಸದಸ್ಯ ಬಿ.ಎನ್. ಚಂದ್ರಪ್ಪ ಆರೋಪಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ 152ನೇ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಕಾಂಗ್ರೆಸ್ ಪಕ್ಷದಿಂದ ಇಂದು ಹಮ್ಮಿಕೊಂಡಿದ್ದ `ಆರೋಗ್ಯ ಹಸ್ತ’ ಮತ್ತು ಕೊರೊನಾ ಯೊಧರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟದ ಮಧ್ಯೆ ಸಂಸತ್ತು, ವಿಧಾನಸೌಧ ಬಂದ್ ಮಾಡಲಾಗಿತ್ತು. ಆದರೆ ಕೆಪಿಸಿಸಿ ತನ್ನ ಕಚೇರಿಯನ್ನು ತೆರೆದು ಕೊರೊನಾ ಜಾಗೃತಿ ಮೂಡಿಸುವ ಬದ್ಧತೆ ಪ್ರದರ್ಶನ ಮಾಡಿರುವುದು ಕಾಂಗ್ರೆಸ್‍ನ ತತ್ವ ಸಿದ್ಧಾಂತಗಳಿಗೆ ಉತ್ತಮ ನಿದರ್ಶನವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಧಾನಿಗಳು ಬಡವರ ಪರವಾಗಿದ್ದರು. ಆದರೆ, ಬಿಜೆಪಿ ಪಕ್ಷದ ಪ್ರಧಾನಿಗಳು  ಶ್ರೀಮಂ ತರಾದ ಉದ್ಯಮಿ ಅಂಬಾನಿ, ಅದಾನಿಗಳ ಪರವಾಗಿದ್ದಾರೆ ಎಂದು ಲೇವಡಿ ಮಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀ ಯರ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತ ಆಡಳಿತದೊಂದಿಗೆ ಸಮರ್ಥ ವಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜವಾಹರಲಾಲ್ ನೆಹರೂರವರು ತಮ್ಮ ಶ್ರೀಮಂತಿಕೆಯನ್ನು ಬಡವರಿಗಾಗಿ ತ್ಯಾಗ ಮಾಡಿ ಸರಳತೆಗೆ ಸಾಕ್ಷಿಯಾದರು. ಆದರೆ, ಮೋದಿಯವರು ದುಬಾರಿ ವೆಚ್ಚದ ಕೋಟುಗಳನ್ನು ಧರಿಸಿ ಬಂಡವಾಳ ಶಾಹಿಗಳ ಉದ್ದಾರಕ್ಕಾಗಿ ಪ್ರಧಾನಿಯಾಗಿದ್ಧಾರೆ ಎಂದರು. 

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಕೊರೊನಾ ಜಾಗೃತಿ ಅತ್ಯವಶ್ಯಕ ವಾಗಿದ್ದು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರನ್ನು ವಾರಿಯರ್ಸ್‍ಗಳಾಗಿ ನೇಮಿಸಿ ಕೋವಿಡ್ ನಿಯಂತ್ರಿಸುವ ಜೊತೆಗೆ ಜನಸಾಮಾನ್ಯರ ಅಳಲಿಗೆ ಸ್ಪಂದಿಸುತ್ತಾ ಪಕ್ಷ ಸಂಘಟನೆಗೆ ತಳಪಾಯ ಹಾಕಲಾಗುವುದು ಎಂದು ತಿಳಿಸಿದರು. 

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಗ್ರಾಪಂ ಮಟ್ಟದ ಕೋವಿಡ್ ಯೋಧರಿಗೆ ಆರೋಗ್ಯ ಹಸ್ತ ಕಿಟ್ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಸಂಚಾಲಕ ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್‌ ಅಹಮ್ಮದ್, ಕಮತ್ತಹಳ್ಳಿ ಮಂಜಣ್ಣ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಜಿಪಂ ಸದಸ್ಯೆ ಉಮಾ ವೆಂಕಟೇಶ್, ಮಾಜಿ ಸದಸ್ಯೆ ನಾಗರತ್ನಮ್ಮ ಮಲ್ಲೇಶಪ್ಪ, ತಾಪಂ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಉಪಾಧ್ಯಕ್ಷ ಮುದೇಗೌಡ್ರ ಬಸವರಾಜಪ್ಪ, ಸದಸ್ಯ ಕುಬೇಂದ್ರಪ್ಪ, ಮುಖಂಡರಾದ ಟಿ.ತಿಪ್ಪೇಸ್ವಾಮಿಗೌಡ, ಸಿ.ತಿಪ್ಪೇಸ್ವಾಮಿ, ಶಂಭುಲಿಂಗಪ್ಪ,  ಶ್ರೀನಿವಾಸ್, ರಮೇಶ್ ಯಾದವ್, ವಿಜಯ್ ಕೆಂಚೋಳ್, ಮಹಿಳಾ ಘಟಕದ ಕೆಂಚಮ್ಮ, ಸವಿತಾ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!