ದಿಂಡಿ ಉತ್ಸವದಲ್ಲಿ ಪ್ರತಿಭಾ ಪುರಸ್ಕಾರ

ದಾವಣಗೆರೆ, ನ.29- ನಗರದ ದೊಡ್ಡಪೇಟೆಯ ಶ್ರೀ ವಿಠಲ ಮಂದಿರದಲ್ಲಿ ಇಂದು ನಡೆದ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಮಹಾಪೌರರೂ ಆದ ನಾಮದೇವ ಸಿಂಪಿ ಸಮಾಜ ದೈವ ಮಂಡಳಿಯ ಅಧ್ಯಕ್ಷ ಎಂ.ಎಸ್. ವಿಠಲ್ ಮಹೇಂದ್ರಕರ್ ಅವರ ನೇತೃತ್ವ ಮತ್ತು ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅವರ ಅಧ್ಯಕ್ಷತೆಯಲ್ಲಿ ಏರ್ಪಡಾಗಿದ್ದ ಈ ಕಾರ್ಯಕ್ರಮವನ್ನು ಡಿಆರ್ ಎಂ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜೆ.ಬಿ. ರಾಜ್ ಅವರು ಉದ್ಘಾಟಿಸಿದರು.

ಲೆಕ್ಕಪರಿಶೋಧಕರುಗಳಾದ ಪಿ. ದಿಲೀಪ್, ಬಂಗಾರೇಶ್ವರ ಎ. ದಾವಸ್ಕರ್, ಆಜಾದ್ ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ರವೀಂದ್ರ ಕಾಲಭೈರವ, ನಿವೃತ್ತ ಯೋಧ ಬಿ.ಎನ್. ಷಣ್ಮುಖ ಅವರುಗಳನ್ನು ಸನ್ಮಾನಿಸಲಾಯಿತು. 

ಶ್ರೀ ಅಂಬಾಭವಾನಿ ಅರ್ಬನ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಎ. ಕಿರಣ್ ಕುಮಾರ್, ನ್ಯೂ ಇಂಡಿಯಾ ಅಸ್ಯುರೆನ್ಸ್ ನಿವೃತ್ತ ಆಡಳಿತಾಧಿಕಾರಿ ಅಶೋಕ ಮಾಳೋದೆ, ಸಮಾಜದ ಮುಖಂಡರುಗಳಾದ ಆನಂದರಾವ್ ರಾಕುಂಡೆ, ಪರಶುರಾಮ್, ಪ್ರಭಾಕರ್, ಪ್ರೊ. ಪರುಶರಾಮ್, ಕೌಸಲ್ಯಾ ಬಾಯಿ, ವಿಜಯಕುಮಾರ, ಕೆ.ಬಿ. ಶಂಕರ ನಾರಾಯಣ, ಜಗನ್ನಾಥ ಗಂಜಿಗಟ್ಟೆ, ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!