ದಾವಣಗೆರೆ, ಜೂ.25- ಜಿಲ್ಲಾಡಳಿತದಿಂದ ದಾವಣಗೆರೆ ಕ್ಲಬ್ ನ ಸದಸ್ಯರು ಮತ್ತು ಅವರ ಕುಟುಂಬದವರಿಗಾಗಿ ದಾವಣಗೆರೆ ಕ್ಲಬ್ ಕಚೇರಿಯಲ್ಲಿ ಕೋವಿಡ್ ಉಚಿತ ಲಸಿಕೆ ಶಿಬಿರವು ಇಂದು ನಡೆಯಿತು. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ಅವರು ಶಿಬಿರದಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು. ದಾವಣಗೆರೆ ಕ್ಲಬ್‌ನ ಅಧ್ಯಕ್ಷ ಮತ್ತಿಹಳ್ಳಿ ವೀರಣ್ಣ ಅವರ ನೇತೃತ್ವದಲ್ಲಿ ಉಪಾಧ್ಯಕ್ಷ ಎ.ಬಿ.ಚಂದ್ರಶೇಖರ್, ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟಿ, ಸಹ ಕಾರ್ಯದರ್ಶಿ ಎಸ್.ಜಿ.ಉಳವಯ್ಯ, ಕೋಶಾಧ್ಯಕ್ಷ ಲಿಂಗರಾಜ ವಾಲಿ, ನಿರ್ದೇಶಕರುಗಳಾದ ಸದಾನಂದ್ ಬೆಳ್ಳೂಡಿ, ಹೆಚ್.ವಿ.ರುದ್ರೇಶ್, ತಿಮ್ಮರಾಜ್ ಗುಪ್ತ ಮತ್ತಿತರರು ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.
January 8, 2025