ದಾವಣಗೆರೆ, ಫೆ.23 – ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಮೊಟ್ಟಮೊದಲ ಬಾರಿ ಗ್ರಾಮೀಣ ಪ್ರದೇಶದಲ್ಲಿ ಎತ್ತರ ವಿಭಾಗದ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಯುವಶಕ್ತಿ ಫ್ರೆಂಡ್ಸ್ ಗ್ರೂಪ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಕಕ್ಕರಗೊಳ್ಳ ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಗ್ರಾಮ ಮೊದಲಿನಿಂದಲೂ ಕ್ರೀಡೆ, ಕಲೆ ಇವುಗಳಲ್ಲಿ ಹೆಸರುವಾಸಿ. ಇದರ ಜತೆಗೆ ದೇಹದಾರ್ಢ್ಯ ಸ್ಪರ್ಧೆ ಸೇರ್ಪಡೆಯೊಂದಿಗೆ ಇನ್ನೂ ಹೆಚ್ಚಿನ ಮಹತ್ವ ನೀಡಿದಂತಾಗಿದೆ ಎಂದು ಈ ಸಂದರ್ಭದಲ್ಲಿ ಯುವಶಕ್ತಿ ಫ್ರೆಂಡ್ಸ್ ಗ್ರೂಪ್ಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ವಿರುಪಾಕ್ಷಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ದೇಹದಾರ್ಢ್ಯ ಸ್ಪರ್ಧೆ ಅಪರೂಪ, ಈ ಕಾರ್ಯಕ್ರಮದ ಯಶಸ್ಸಿಗೆ ತೀರ್ಪುಗಾರರು ಗೊಂದಲ ಸೃಷ್ಟಿಸದೇ ಉತ್ತಮ ತೀರ್ಪು ನೀಡಿ ಎಂದು ಹೇಳಿದರು.
ದಾವಣಗೆರೆಯ ವಿನೋಬನಗರದ ಮಾರುತಿ ಪ್ರಥಮ ಬಹುಮಾನ 15,000/- ಪಾರಿತೋಷಕ, ರಾಣೆಬೆನ್ನೂರಿನ ಇಮ್ತಿಯಾಜ್ ಯಾನಿಯರ್ ದ್ವಿತೀಯ ಬಹುಮಾನ 10,000/- ಪಾರಿತೋಷಕ, ದಾವಣಗೆರೆಯ ಎಚ್.ಕೆ.ಆರ್. ಸರ್ಕಲ್ನ ಅರ್ಜುನ್ ತೃತೀಯ ಬಹುಮಾನ 5,000/- ಪಾರಿತೋಷಕ ಪಡೆದುಕೊಂಡರು. ಸ್ಪರ್ಧೆಯ ತೀರ್ಪುಗಾರರಾಗಿ ರಾಷ್ಟ್ರೀಯ ಪಟುಗಳಾದ ಇಕ್ಬಾಲ್ ಮತ್ತು ಖಾದರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಅಡಿಕೆ ಸೊಸೈಟಿ ನಿರ್ದೇಶಕ ಮಠದ ಬಸವರಾಜಯ್ಯ, ತಾಪಂ ಸದಸ್ಯ ಬಿ.ಜಿ. ಸಂಗನಗೌಡ್ರು, ಎಂ. ಷಡಕ್ಷರಪ್ಪ, ತೋಟದರ ಲೋಹಿತ್, ಕೆಇಬಿ ಕರಿಬಸಪ್ಪ, ತೋಟದರ ಜೀವನ್, ಎಂ.ಎನ್. ನರೇಂದ್ರ, ಶ್ರೀನಿವಾಸ್ ದಾಸಕರಿಯಪ್ಪ, ನಿಟುವಳ್ಳಿ ತೋಟದ ಬಸವರಾಜಪ್ಪ, ಯುವಶಕ್ತಿ ಫ್ರೆಂಡ್ಸ್ ಗ್ರೂಪ್ನ ಸದಸ್ಯರಾದ ಸುನೀಲ್, ರಘು, ವಿಶ್ವ, ಮಾರುತಿ, ಅಣ್ಣಪ್ಪ, ಮಂಜುನಾಥ್, ಧನ್ಯಕುಮಾರ್ ಹಾಗೂ ಗ್ರಾಮದ ಗ್ರಾಮಸ್ಥರು ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಅಮರೇಶ್ ನಡೆಸಿಕೊಟ್ಟರು.