ಜನ ಬಿಜೆಪಿಗೆ ಪಾಠ ಕಲಿಸುವ ಕಾಲ ದೂರವಿಲ್ಲ

ಹರಿಹರ ಬ್ಲಾಕ್ ಕಾಂಗ್ರೆಸ್‌ನಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಹರಿಹರ,ಫೆ.23- ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರಬಡವರ ಮತ್ತು ರೈತರ ಜೀವನದ ಜೊತೆ ಆಟವಾಡುತ್ತಾ, ಆಡಳಿತ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ, ಗಾಂಧಿ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹನ ಮಾಡಿ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತವನ್ನು ಮಾಡುತ್ತಿರುವ ಬಿಜೆಪಿ ಸರ್ಕಾರಗಳು ದೇಶವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವುದಾಗಿ ಹೇಳಿ ಅಧಿಕಾರಕ್ಕೆ ಬಂದು, ಈ ದೇಶದ ಜನರನ್ನು ಬೀದಿಪಾಲು ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗುತ್ತಿ ದ್ದಾರೆ. ವಿಶ್ವದ ಯಾವುದೇ ದೇಶದ ಪ್ರಧಾನಿ ಇಂತಹ ಸುಳ್ಳು ಭರವಸೆ ನೀಡಿ ಆಡಳಿತ ಮಾಡಿಲ್ಲ. ಇವರು ಅಧಿಕಾರಕ್ಕೆ ಬಂದಾಗಿನಿಂದ ದೇಶ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ನಾಗೇಂದ್ರಪ್ಪ ಮಾತನಾಡಿ, ಬಿಜೆಪಿ ಸರ್ಕಾರ ರೈತ ಮತ್ತು ಕಾರ್ಮಿಕರ ವಿರೋಧಿ ಸರ್ಕಾರವಾಗಿದೆ ಎಂದು ಛೇಡಿಸಿದರು.

ಎಪಿಎಂಸಿ ಸದಸ್ಯ ಮಂಜು ನಾಥ್ ಪಾಟೀಲ್ ಕೊಮಾರ ನಹಳ್ಳಿ ಮಾತನಾಡಿ, ರೈತರು ತಮಗೆ ಅನ್ಯಾಯವಾಗುತ್ತಿರುವು ದನ್ನು ಖಂಡಿಸಿ ಕಳೆದ ಮೂರು ತಿಂಗಳಿಂದ ಉಗ್ರವಾದ ಹೋರಾಟ ಮಾಡು ತ್ತಿದ್ದಾರೆ. ಆದರೆ, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಯವರು ಮಾಡುತ್ತಿಲ್ಲ  ಎಂದು ಕಿಡಿ ಕಾರಿದರು.

ಜಿ.ಪಂ. ಸದಸ್ಯ ತೇಜಸ್ವಿ ಪಾಟೀಲ್ ಮಾತ ನಾಡಿ,  ರೈತರು ದಿವಾಳಿಯಾದರೆ ದೇಶವು ದಿವಾಳಿ ಹಂತವನ್ನು ತಲಪುತ್ತದೆ ಎಂಬುದನ್ನು ಅರಿತು ಸರ್ಕಾರ ಕೃಷಿ ಕಾಯ್ದೆ  ತಿದ್ದುಪಡಿ ಮಾಡುವುದನ್ನು ಕೈ ಬಿಡಬೇಕು ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ ಮಾತನಾಡಿ, ದೇಶದಲ್ಲಿ ಇದುವರೆಗೆ ಯಾವುದೇ ಸರ್ಕಾರ ಆಡಳಿತ ಮಾಡಿದ್ದರೂ ಸಹ ಇಷ್ಟೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕಂಡಿದ್ದಿಲ್ಲ. ಇದ ರಿಂದ ಬಡವರು, ಕೂಲಿ ಕಾರ್ಮಿಕರು, ಜೀವನ ನಡೆಸುವುದು ದುಸ್ತರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕಾರ್, ಬಾಬುಲಾಲ್ ಮಹಬೂಬ್ ಬಾಷಾ, ವಸಂತ್, ಮಾಜಿ ತಾಪಂ ಅಧ್ಯಕ್ಷರಾದ ಟಿ.ಜೆ. ಮುರುಗೇಶಪ್ಪ, ಗುತ್ತೂರು ಹಾಲೇಶಗೌಡ, ಬಸವರಾಜ್ ಬೆಳ್ಳೂಡಿ, ರೈತ ಮುಖಂಡ ಪ್ರಭುಗೌಡ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಜಿಗಳಿ ಆನಂದಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್.ಬಿ. ಹನುಮಂತಪ್ಪ, ಅಭಿದಾಲಿ, ಸಿ.ಎನ್. ಹುಲುಗೇಶ್, ಆನಂದ, ಶಿವಪ್ಪ, ಯತಿರಾಜ್,  ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ವತಿ, ಭಾಗ್ಯಮ್ಮ, ದಾದಾಪೀರ್, ವೈ. ರಘುಪತಿ, ಕೆ. ಅಣ್ಣಪ್ಪ, ವಾಮದೇವ ಕುಂಬಳೂರು, ಗರಡಿಮನಿ ಬಸಪ್ಪ ಮತ್ತಿತರರು ಹಾಜರಿದ್ದರು.

error: Content is protected !!