ಬಾಡದ ಆನಂದರಾಜ್
ದಾವಣಗೆರೆ ಏ 18 – ಮಹಾ ಹೆಮ್ಮಾರಿ ಕೊರೊನಾ ತಡೆಗಟ್ಟುವಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರ ಜಾಗೃತಿಯೊಂದಿಗೆ ಮಾಸ್ಕ್ ಮತ್ತು ಅಂತರ ಕಾಪಾಡುವುದು ಅತೀ ಮುಖ್ಯ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಹೇಳಿದರು.
ಇಂದು ಹಳೇ ಕುಂದುವಾಡದಲ್ಲಿ ಮನಾ ಬ್ರಿಗೇಡ್ ಮತ್ತು ಜನತಾ ರಕ್ಷಣಾ ವೇದಿಕೆ ವತಿಯಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕೊರೊನಾ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಸರ್ಕಾರ ನೀಡುವ ಸೂಚನೆಗಳನ್ನು ಜಾಗೃತಿಯಿಂದ ಪಾಲಿಸುವುದರೊಂದಿಗೆ ಪ್ರತಿಯೊಬ್ಬರೂ ಲಸಿಕೆ ಹಾಕಿಸುವುದರ ಮೂಲಕ ಮತ್ತು ಪ್ರತಿಯೊಬ್ಬರೂ ಮಾಸ್ಕ್ ಹಾಕಿ ಅಂತರ ಕಾಪಾಡಿಕೊಳ್ಳುವುದರ ಮೂಲಕ ಹೆಮ್ಮಾರಿಯನ್ನು ತಡೆಗಟ್ಟಿ ಜೀವ ಉಳಿಸಿಕೊಳ್ಳಬೇಕಾಗಿದೆ. 1995 ರಲ್ಲಿ ದಾವಣಗೆರೆ ತಾಲ್ಲೂಕಿನ ಆವರಗೆರೆ ಗ್ರಾಮ ಮಾದರಿ ಎಂಬ ಹೆಸರಿಗೆ ಪಾತ್ರವಾಗಿತ್ತು. ಅದೇ ರೀತಿ ಹಳೇ ಕುಂದವಾಡ ಗ್ರಾಮ ಇಂದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಜಾತ್ಯತೀತವಾಗಿ, ರಚನಾತ್ಮಕವಾಗಿ, ಸಮಾಜಮುಖಿಯಾಗಿ ಹಳೇ ಕುಂದವಾಡ ಗ್ರಾಮ ಮಾದರಿ ಗ್ರಾಮವಾಗಿ ಬೆಳೆಯುತ್ತಿದೆ ಎಂದು ಆನಂದರಾಜ್ ಹೆಮ್ಮೆಪಟ್ಟರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ಮಾಜಿ ಸದಸ್ಯ ತಿಪ್ಪಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಮಿಟ್ಲಕಟ್ಟೆ ಚಂದ್ರಪ್ಪ, ವಾಣಿ ನಾಗಭೂಷಣ, ಮನಾ ಬ್ರಿಗೇಡ್ ಅಧ್ಯಕ್ಷ ಹಾಗೂ ಪತ್ರಕರ್ತ ಮಧು, ನಾಗರಾಜ್, ಪರಿಸರ ಪ್ರೇಮಿ ದೇವರಮನಿ ಗಿರೀಶ್ ಇನ್ನೂ ಮುಂತಾದವರಿದ್ದರು.