6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಒತ್ತಾಯ

ಹರಪನಹಳ್ಳಿ, ಏ.16- ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಹತ್ತು ದಿನಗಳು ಗತಿಸಿದ್ದು,  ಸಾರಿಗೆ ನೌಕರರ ಒಕ್ಕೂಟ ಹಾಗೂ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ  ಪಟ್ಟಣದ ತೆಗ್ಗಿನ ಮಠದ ಆವರಣದಿಂದ  ಇಜಾರಿ ಶಿರಸಪ್ಪ ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.

ಈ ವೇಳೆ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ ಸರ್ಕಾರ ಸಾರಿಗೆ ನೌಕರರ ಬದುಕನ್ನು  ಕತ್ತಲಲ್ಲಿ ಇಟ್ಟಿದ್ದು, 6ನೇ ವೇತನ ಆಯೋಗದ  ಶಿಫಾರಸ್ಸುಗಳನ್ನು ಜಾರಿ ಮಾಡುವ ಮೂಲಕ ಬೆಳಕನ್ನು ನೀಡಬೇಕು. 

ನೌಕರರ ವಿರುದ್ಧ ಸಾರಿಗೆ  ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ನಿರಂತರ ಕಿರುಕುಳ ನೀಡುತ್ತಿದ್ದಾರೆ. ವೇತನ ಪರಿ ಷ್ಕರಣೆ ಆಗುವವರೆಗೆ ಹೋರಾಟ ನಿರಂತರವಾಗಿ ರುತ್ತದೆ. ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ನ್ಯಾಯವಾದಿ ಸಿದ್ಧಲಿಂಗನಗೌಡ ಮಾತನಾಡಿ ಸರ್ಕಾರ 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಈಡೇರಿಸಬೇಕು. ಸಾರಿಗೆ ಸಂಸ್ಥೆಯ ಆಡಳಿತ ವರ್ಗ ಸ್ಪಂದಿಸಬೇಕು. ಸರ್ಕಾರ ತಕ್ಷಣ ಬೇಡಿಕೆಗಳನ್ನು ಈಡೇರಿಸಿ ಕಾರ್ಮಿಕರ ಮತ್ತು ಕುಟುಂಬದ ಹಿತರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ತೆಗ್ಗಿನ ಮಠದ ಕಾರ್ಯದರ್ಶಿ ಟಿ. ಎಂ. ಚಂದ್ರಶೇಖರಯ್ಯ, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹರಿಯಮ್ಮನಹಳ್ಳಿ ಶಿವರಾಜ, ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್‌, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಗಾಯಿತ್ರಮ್ಮ , ರತ್ನಮ್ಮ, ಸೇರಿದಂತೆ ಕಾಂಗ್ರೆಸ್‌  ಕಾರ್ಯಕರ್ತರು, ಸಾರಿಗೆ ನೌಕರರ ಪರಿವಾರದವರು ಭಾಗವಹಿಸಿದ್ದರು.

error: Content is protected !!