ಅಂಬೇಡ್ಕರ್ ಅವರ ತತ್ವವನ್ನು ಅಳವಡಿಸಿಕೊಳ್ಳಿ

ಹರಪನಹಳ್ಳಿ, ಏ.14- ಅಂಬೇಡ್ಕರ್‍ರವರ ಸಮಾನತೆ, ಭ್ರಾತೃತ್ವ ಮನೋಭಾವನೆಯನ್ನು ಸರ್ವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಾಣವಾದ ನೂತನ ಅಂಬೇಡ್ಕರ್ ಭವನ ಉದ್ಘಾಟಿಸಿ  ಅವರು ಮಾತನಾಡಿದರು.

ಅಂಬೇಡ್ಕರ್‍ರವರು ಭಾರತ ಕಂಡ  ಮಹಾ ಮೇಧಾವಿ. ಸಂವಿಧಾನ ಕರ್ತೃ, ದಮನಿತ ವರ್ಗದ ವಿಮೋಚನೆಯ ಧ್ವನಿ. ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು  ತಿದ್ದುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕೆ ಗಮನ ಹರಿಸಿದ್ದರು. ತಮ್ಮ ಜೀವಿತ ಅವಧಿಯವರೆಗೂ ಸಮಾಜದ ಉನ್ನತಿಗಾಗಿ ಸೇವೆ ಮಾಡಿದ ಮಹಾನ್ ವ್ಯಕ್ತಿಯಾಗಿದ್ದರು. 

ಜಾತೀಯತೆಯನ್ನು ತೊಲಗಿಸಲು ಮಹಿಳೆಯರ ಹಕ್ಕುಗಳ ಬಗ್ಗೆ ಸಾಕಷ್ಟು ಹೋರಾಟ ಮಾಡಿ ಸಂವಿಧಾನ ಬರೆಯುವ ಮೂಲಕ  ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು ಇದೆ ಎಂದು ಪ್ರತಿಪಾದಿಸಿದ ಧೀಮಂತ ನಾಯಕರಾಗಿದ್ದರು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ದಲಿತರು ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದವರು ಅಂಬೇಡ್ಕರ್ ಎಂದರು.

ಈ ಸಂದರ್ಭದಲ್ಲಿ  ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತ್‍ಕರ್,  ಉಪಾಧ್ಯಕ್ಷೆ  ನಿಟ್ಟೂರು ಭೀಮವ್ವ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷರುಗಳಾದ ನಿಟ್ಟೂರು ಸಣ್ಣಹಾಲಪ್ಪ,  ಮಂಜ್ಯಾನಾಯ್ಕ, ಎಸ್.ಟಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಆರ್. ಲೋಕೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಎಂ. ಮಲ್ಲೇಶ್,  ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಉಪವಿಭಾಗಾಧಿಕಾರಿ  ಚಂದ್ರಶೇಖರಯ್ಯ,  ತಹಶೀಲ್ದಾರ್ ಎಲ್.ಆರ್. ನಂದೀಶ್, ಡಿವೈಎಸ್ಪಿ ಹಾಲಮೂರ್ತಿ ರಾವ್, ಇ.ಒ. ಈಶ್ವರ ಪ್ರಸಾದ್, ಸಮಾಜ ಕಲ್ಯಾಣಧಿಕಾರಿ ಆನಂದ ವೈ. ಡೊಳ್ಳಿನ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ,  ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ. ಭೀಮಪ್ಪ, ಕೆಆರ್‌ಡಿಐಎಲ್ ಇಂಜಿನಿಯರ್ ವೀರಣ್ಣ ಅಂಗಡಿ, ಮುಖಂಡರಾದ ಎಂ.ಪಿ. ನಾಯ್ಕ್, ಬಾಗಳಿ ಕೊಟ್ರೇಶಪ್ಪ,  ಆರ್.ಕರಿಗೌಡ್ರು, ಎಸ್.ಪಿ. ಲಿಂಬ್ಯಾನಾಯ್ಕ, ಶಿರಗನಹಳ್ಳಿ ವಿಶ್ವನಾಥ್, ಚಂದ್ರಪ್ಪ, ಸಂತೋಷ್, ರಂಗಾಪುರ ಬಸವರಾಜ್, ಉದಯ್,  ವಕೀಲ ರಾದ ಕೆ. ಪ್ರಕಾಶ್, ಜಾತಪ್ಪ, ಮಾಬೂಸಾಬ್, ರಾಘವೇಂದ್ರ ಶೆಟ್ಟಿ, ಪರಮೇಶ್ವರಪ್ಪ, ಚಿರಸ್ತಹಳ್ಳಿ ಬಸವರಾಜ್,  ಪುರಸಭೆ ಸದಸ್ಯರುಗಳಾದ  ಹೆಚ್.ಎಂ. ಅಶೋಕ, ಎಂ.ಕೆ. ಜಾವೀದ್ ಹಾಗು ಇನ್ನಿತರರು ಉಪಸ್ಥಿತರಿದ್ದರು.

error: Content is protected !!