ಹರಿಹರ, ಫೆ. 10 – ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿಗಾಗಿ ಶ್ರೀ ಕಾಗಿನೆಲೆ ಗುರುಪೀಠದಿಂದ ಬೆಂಗಳೂರಿನವರೆಗೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶ ಮಾಡಿದ ನಂತರ ಹರಿಹರ ನಗರಕ್ಕೆ ಇಂದು ಆಗಮಿಸಿದಾಗ, ಶ್ರೀಗಳನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು.
ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಶ್ರೀ ರೇವಣಸಿದ್ದೇಶ್ವರ ಹಾಗೂ ಬೀರಪ್ಪ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠಕ್ಕೆ ತೆರಳಿದರು.
ಶಾಸಕ ಎಸ್. ರಾಮಪ್ಪ, ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಪಿ. ಗಂಗಾಧರ್ ಮಲೇಬೆನ್ನೂರು, ದೇವೇಂದ್ರಪ್ಪ ಕುಣೆಬೆಳಕೇರಿ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಪ್ರಾಂಶುಪಾಲ ಬೀರಪ್ಪ, ವಕೀಲ ಎಂ. ನಾಗೇಂದ್ರಪ್ಪ, ಸುರೇಶ್ ಚಂದಪೂರ್, ನಗರಸಭೆ ಸದಸ್ಯ ಎಸ್.ಎಂ. ವಸಂತ್, ನಂದಿಗಾವಿ ಶ್ರೀನಿವಾಸ್, ಜಗದೀಶ್ ಚೂರಿ, ಎಂ.ಹೆಚ್.ಬಿ. ಚಂದ್ರಶೇಖರ್, ವಿಜಯ ಮಹಾಂತೇಶ್, ಸಿ.ಎನ್. ಹುಲಿಗೇಶ್, ಯತಿರಾಜ್, ಹನುಮಂತಪ್ಪ, ತಿಪ್ಪೇಶ್, ಕುಂಬಳೂರು ವಿರೂಪಾಕ್ಷಪ್ಪ, ಸಿ.ಎನ್. ಮಂಜುನಾಥ್, ನಗರಸಭೆ ಮಾಜಿ ಸದಸ್ಯೆ ಡಿ.ವೈ. ಇಂದ್ರಮ್ಮ, ತಾ.ಪಂ. ಮಾಜಿ ಅಧ್ಯಕ್ಷ ಅಣ್ಣೇಶ್ ಐರಣಿ, ಎರೇಸೀಮಿ ನಾಗರಾಜ್, ಪರಮೇಶ್ವರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.