ಹರಿಹರ, ಫೆ.4- ನಗರದಲ್ಲಿ ಶ್ರೀರಾಮ ಸಂಕೀರ್ತನಾ ಯಾತ್ರಾ ಮೆರವಣಿಗೆಯು ಇಂದು ವಿಜೃಂಭಣೆಯಿಂದ ಜರುಗಿತು.
ನಗರದ ಪ್ರಸಿದ್ಧ ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಶಾರದೇಶಾನಂದ ಮಹಾಸ್ವಾಮೀಜಿ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ಎಸ್.ಎಂ. ವೀರೇಶ್ ಅವರುಗಳು ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಯುವಕರು ಶ್ರೀರಾಮ ಜೈಕಾರ ಹಾಕಿದರೆ, ವಿವಿಧ ಮಹಿಳಾ ಭಜನೆ ತಂಡದವರು ಕೋಲಾಟದ ಮೂಲಕ ಕುಣಿದು ಮೆರವಣಿಗೆಗೆ ಕಳೆ ತಂದರು.
ಮೆರವಣಿಗೆಯು ಶ್ರೀ ಹರಿಹರೇಶ್ವರ ದೇವ ಸ್ಥಾನದಿಂದ ಪ್ರಾರಂಭಗೊಂಡು ರಾಜಬೀದಿಗಳಲ್ಲಿ ಸಂಚರಿಸಿ ರಾಜಾರಾಮ್ ಕಾಲೋನಿಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕ ವರಹಾಚಾರ್, ನಗರಸಭೆ ಸದಸ್ಯೆ ಅಶ್ವಿನಿ, ಹನುಮಂತಪ್ಪ, ಶಂಕರ್ ಖಟಾವ್ಕರ್, ರಜನಿಕಾಂತ್, ನೀತಾ ಮೆಹರ್ವಾಡೆ, ಮಾಜಿ ನಗರಸಭೆ ಉಪಾಧ್ಯಕ್ಷೆ ಅಂಬುಜಾ ಪಿ. ರಾಜೊಳ್ಳಿ, ಮುಖಂಡರಾದ ಹೆಚ್.ಎಂ. ಶಿವಾನಂದಪ್ಪ ಹಲಸಬಾಳು, ಬಾತಿ ಚಂದ್ರಶೇಖರ್, ಕೃಷ್ಣಮೂರ್ತಿ ಶೆಟ್ಟಿ, ಶಿವಪ್ರಕಾಶ್ ಶಾಸ್ತ್ರಿ, ತುಳಜಪ್ಪ ಭೂತೆ, ಮಾರುತಿ ಶೆಟ್ಟಿ, ಅಜಿತ್ ಸಾವಂತ್, ಚಂದನ್ ಮೂರ್ಕಲ್, ಪ್ರಕಾಶ್, ಚೇತನ್ ತಿಪ್ಪಶೆಟ್ಟರ್, ಡಾ. ಖಮಿತ್ಕರ್, ಪ್ರಮೀಳಾ ನಲ್ಲೂರು, ರೂಪಾ ಕಾಟ್ವೆ, ಶ್ರೀನಿವಾಸ್ ಚಂದಪೂರ್, ಸುನಿಲ್, ಪ್ರಶಾಂತ್ ಮತ್ತು ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಸತೀಶ್ಕುಮಾರ್, ನಗರ ಠಾಣೆ ಪಿಎಸ್ಐಗಳಾದ ಸುನೀಲ್, ಬಸವರಾಜ್ ತೆಲಿ, ಗುತ್ತೂರು ಠಾಣೆಯ ಪಿಎಸ್ಐ ಡಿ. ರವಿಕುಮಾರ್, ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ ಅವರುಗಳು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.