ದಾವಣಗೆರೆ: ಶಾಂತಿನಗರ ರಿಂಗ್ ರಸ್ತೆಯ ಹಣಿಗೆರೆ ಭೂತಪ್ಪ ಶ್ರೀ ಚೌಡೇಶ್ವರಿ ದೇವಿಯ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಶಿಲಾಮೂರ್ತಿಯ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಮಾರಂಭವು ಇಂದು ನಡೆಯಲಿದೆ.
ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇಂದು ಬೆಳಿಗ್ಗೆ 8 ರಿಂದ 10.30 ರವರೆಗೆ ದೇವಾಲಯ ಪ್ರವೇಶ ಮತ್ತು ಶ್ರೀ ದೇವಿಯ ಶಿಲಾಮೂರ್ತಿಯನ್ನು ಪುನಃ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಂತರ ಬೆಳಿಗ್ಗೆ 9 ರಿಂದ ಶ್ರೀಗಳಿಂದ ಶ್ರೀದೇವಿ ಶಿಲಾಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ಆಶೀರ್ವಚನ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಎಸ್. ಮಲ್ಲಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಪಾಲಿಕೆ ಮಾಜಿ ಸದಸ್ಯೆ ಆಶಾ ಉಮೇಶ್, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ವಿಶಾಲಾಕ್ಷಮ್ಮ ರುದ್ರಪ್ಪ, ಎಸ್.ಎಸ್. ಜಿ. ಚಿದಾನಂದಪ್ಪ, ಈರಯ್ಯ, ಪಿ.ಜೆ. ಹೇಮರಾಜ್, ರಮೇಶ್ ಮತ್ತಿತರರು ಉಪಸ್ಥಿತರಿರುವರು. ಮಧ್ಯಾಹ್ನ 12.30 ರಿಂದ ಅನ್ನ ಸಂಪತರ್ಪಣೆ ನಡೆಯುವುದು.