ಜಗಳೂರು : ಪುರ ಪಿತೃಗಳ ನೆರವಿಲ್ಲದೇ ನಾಮಫಲಕ ಅಳವಡಿಕೆ

ಜಗಳೂರು : ಪುರ ಪಿತೃಗಳ ನೆರವಿಲ್ಲದೇ ನಾಮಫಲಕ ಅಳವಡಿಕೆ

ಜಗಳೂರು, ಮಾ. 27 – ಹಲವಾರು ವರ್ಷಗಳಾದರೂ   ಪಟ್ಟಣದ 12ನೇ ವಾರ್ಡ್‍ನಲ್ಲಿರುವ ಜೆಡಿ ಲೇಔಟ್‍ಗೆ ಪ.ಪಂ. ಕೌನ್ಸಲರ್‍ಗಳು ನಾಮ ಫಲಕ ಅಳವಡಿಸದ ಹಿನ್ನೆಲೆಯಲ್ಲಿ ಲೇಔಟ್ ನಿವಾಸಿಗಳೇ ಸದಸ್ಯರು ನಾಚುವಂತೆ ಸ್ವಂತ ಹಣದಲ್ಲಿ  ಜೆಡಿ ಲೇಔಟ್‍ಗೆ ನಾಮ ಫಲಕಗಳನ್ನು ಶುಕ್ರವಾರ ಅಳವಡಿಸಿದರು. 

ಜಗಳೂರು ಪಟ್ಟಣವಾದಾಗಿ ನಿಂದಲೂ ಏರಿಯಾಗಳಿಗೆ ಕೌನ್ಸಿಲರ್‍ಗ ಳು ಯಾರು?, ಬಡಾವಣೆಯ ಹೆಸರು, ಮುಖ್ಯ ರಸ್ತೆ, ಅಡ್ಡ ರಸ್ತೆಗಳಿಲ್ಲದೇ ಹೊರಗಿನಿಂದ ಬಂದವರಿಗೆ ವಿಳಾಸ ತೊಂದರೆ ಬಗ್ಗೆ ಗೊಂದಲಗಳಿದ್ದವು.  ಎಚ್ಚೆತ್ತುಕೊಳ್ಳದ ಪ.ಪಂ. ಕೌನ್ಸಿಲರ್‍ಗಳ ನಡೆಯಿಂದ ಬೇಸತ್ತು 12ನೇ ವಾರ್ಡ್‍ನ ಜೆಡಿ ಬಡಾವಣೆಯ ನಿವಾಸಿಗಳು ಸ್ವಂತ ಖರ್ಚಿನಲ್ಲಿ ನಾಮ ಫಲಕಗಳನ್ನು ಬರೆಸಿ ಪೂಜೆ ನೆರವೇರಿಸಿದ್ದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಅಣಕಿಸುವಂತೆ ಕಂಡು ಬಂತು. 

ಈ ವೇಳೆ ಮಾತನಾಡಿದ ನಿವೃತ್ತ ಅಧಿಕಾರಿ ಒ. ತಿಮ್ಮಣ್ಣ, ಜೆಡಿ ಬಡಾವಣೆ ನಿರ್ಮಾಣವಾದಾಗಿನಿಂದಲೂ ನಾಮ ಫಲಕ ಅಳವಡಿಸಿರಲಿಲ್ಲ. ಕೌನ್ಸಿಲರ್ ಗಳಿಗೆ ಹೇಳಿ ಸಾಕಾಯಿತು. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ನಾಮಫಲಕ ಅಳವಡಿಸಿದ್ದೇವೆ ಎಂದರು.

ಈ ವೇಳೆ ನಿವಾಸಿಗಳಾದ ಪಶುವೈದ್ಯ ಪರೀಕ್ಷಕ ಕೆ.ಎಸ್. ಶಾಂತಕುಮಾರ್, ಶಿಕ್ಷಕ ಸಿ.ಕೆ. ರುದ್ರಮುನಿ, ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನಯ್ಯ, ನಾಗರತ್ನಮ್ಮ, ಮಾಜಿ ಸೈನಿಕ ವೇಮ ರೆಡ್ಡಿ, ಉಮೇಶ್ ಸೇರಿದಂತೆ ಅನೇಕರು ಇದ್ದರು.

error: Content is protected !!