ಹರಿಹರ, ಮಾ.27- ಬಡತನದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎನ್ನಲಾದ ಐವರನ್ನು ನಗರದ ತುಂಗಾರತಿ ಸ್ಥಳದಲ್ಲಿ ಪ್ರವಾಸೋದ್ಯಮ ಇಲಾಖೆಯ, ಪ್ರವಾಸಿ ಮಿತ್ರರಾದ ಹನುಮಂತರಾಜು ಮತ್ತು ಸಾವಿತ್ರಮ್ಮ ರಕ್ಷಿಸುವ ಕೆಲಸ ಮಾಡಿದ್ದಾರೆನ್ನಲಾಗಿದೆ.
ಎಲೆಬೇತೂರು ಗ್ರಾಮದವರಾದ ಇವರು ನದಿಯಲ್ಲಿ ಪ್ರಾಣ ಹಾನಿ ಮಾಡಿಕೊಳ್ಳುವುದಕ್ಕೆ ಬಂದಿದ್ದರು ಎನ್ನಲಾಗಿದೆ. ಇವರನ್ನು ರಕ್ಷಣೆ ಮಾಡಿ, ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದಾಗ ಅಲ್ಲಿ ಹಿರಿಯ ಅಧಿಕಾರಿಗಳು ಬುದ್ದಿವಾದ ಹೇಳಿ, ವಾಪಸ್ ಕಳಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ ಎಂದು ಗೊತ್ತಾಗಿದೆ.