ಮಕ್ಕಳಲ್ಲಿ ಸರ್ವ ಧರ್ಮಗಳ ಸೌಹಾರ್ದತೆ ಮೂಡಿಸುವುದು ಅವಶ್ಯಕ

ಮಕ್ಕಳಲ್ಲಿ ಸರ್ವ ಧರ್ಮಗಳ ಸೌಹಾರ್ದತೆ ಮೂಡಿಸುವುದು ಅವಶ್ಯಕ

ಇಫ್ತಿಯಾರ್ ಕೂಟದಲ್ಲಿ ಹರಪನಹಳ್ಳಿ ತೆಗ್ಗಿನ ಮಠ ಸಂಸ್ಥಾನದ  ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ಮಾ. 23 – ಸಮ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವುದರ ಜತೆಗೆ ಸರ್ವ ಧರ್ಮಗಳ ಕುರಿತು ಸೌಹಾರ್ದತೆ ಮೂಡಿಸುವ ಅವಶ್ಯಕತೆ ಇದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೆಕ್ಕದ ಗರಡಿ ಕೆರೆಯ ಇಸ್ರಾ ಅಹ್ಲೇ ಹದೀಸ್ ಮಸ್ಜಿದ್ ಎ ಯಲ್ಲಿ   ರಂಜಾನ್  ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜದವರು ಇಂದು ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು. 

ನಮ್ಮ ರಾಷ್ಟ್ರದಲ್ಲಿ ಹಿಂದೂ, ಬೌದ್ಧ, ಜೈನ, ಮುಸ್ಲಿಂ, ಕ್ರೈಸ್ತ ಹೀಗೆ ಹಲವಾರು ಧರ್ಮದವರು ಸಾಕಷ್ಟು ಜನಸಂಖ್ಯೆ ಇದ್ದರೂ, ಎಲ್ಲರೂ ಭಾರತೀಯರು ಎಂಬ ಒಂದೇ ಭಾವನೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ.  ಇಲ್ಲಿ ಭಾಷೆ, ಆಚಾರ, ವಿಚಾರ, ಉಡುಗೆ, ಹಬ್ಬಗಳಲ್ಲಿ ಭಿನ್ನತೆ ಇದ್ದರೂ, ರಾಷ್ಟ್ರದ ಏಕತೆಗೆ ಅಡ್ಡಿಯಾಗಿಲ್ಲ. ಭಾರತ ಮಾತೆಯ ಮಕ್ಕಳು ಎಂಬ ಭಾವನೆ ಇದೆ ಎಂದರು.

ಷೇಖ್ ಅಬ್ದುಲ್ ವಹಾಬ್ ಅಬ್ದುಲ್ ಅಜೀಜ್ ಜಾಮಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಹಸಿವಿನ ಕಠಿಣತೆ ತಿಳಿಯುವುದೇ ಇಫ್ತಿಯಾರ್ ಕೂಟವಾಗಿದೆ. ಮನುಷ್ಯನ ತಾಳ್ಮೆ ಯನ್ನು ಪರೀಕ್ಷಿಸುವುದೇ ಪ್ರಾರ್ಥನೆಯಾಗಿದೆ ಎಂದು ತಿಳಿಸಿದರು.

ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಶ್ರೀ  ಸಣ್ಣ ಹಾಲ ಸ್ವಾಮಿಜೀ ಮಾತನಾಡಿ,  ಮುಸ್ಲಿಮರಿಗೆ ರಂಜಾನ್, ಹಿಂದೂಳಿಗೆ ಶ್ರಾವಣ ಮಾಸ  ಶ್ರೇಷ್ಠವಾಗಿದೆ. ಹಿಂದೂ ಮುಸ್ಲಿಮರು ಅತ್ಯಂತ ಭಾವೈಕ್ಯತೆಯಿಂದ ಇರಲು ಇಂತಹ ಕಾರ್ಯಕ್ರಮಗಳು ಅವಶ್ಯವಾಗಿವೆ. ಪ್ರತಿ ಯೊಬ್ಬ ಧರ್ಮೀಯರು ತಮ್ಮ ಆದಾಯದಲ್ಲಿ ಶೇ. 25 ರಷ್ಟು ಸಂಪತ್ತನ್ನು ಜಕಾತ್ ಮೂಲಕ ದಾನ ಮಾಡು ವುದರಿಂದ  ಬಡತನ ದೂರವಾಗುತ್ತದೆ. ಪ್ರತಿಯೊಬ್ಬ ಮುಸ್ಲಿಮರು ಜಕಾತನ್ನು ಕಡ್ಡಾಯವಾಗಿ ಪಾಲಿಸುವಂತೆ ಇಸ್ಲಾಂ ಧರ್ಮದಲ್ಲಿ ಸೂಚಿಸಿದೆ ಎಂದರು.

ಮೌಲಾನ್ ರಿಯಾಜ್, ಅಹಮದ್‌, ಉಮ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರದುರ್ಗದ ಮಹಮದ್ ನೂರುಲ್ಲಾ ಸಾಹೇಬ್ ಮಾತನಾಡಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ,  ಸಾಹಿತಿ ಇಸ್ಮಾಯಿಲ್ ಎಲಿಗಾರ್, ಪುರಸಭೆ ಮಾಜಿ ಅಧ್ಯಕ್ಷ ಮಹಬೂಬ್ ಸಾಹೇಬ್, ಎಚ್.ಕೆ. ಹಾಲೇಶ್,  ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ. ಕೆ. ಉಚ್ಚೆಂಗೆಪ್ಪ, ಬಡ್ಡಿ ಶಬ್ಬೀರ್, ಡಂಕಿ ಇಮ್ರಾನ್, ಎ.ಜಾವೀದ್,  ಟಿ.ಎಂ. ವೀರೇಶ್‌, ಕೆ.ಎಂ. ರೇವಣಸಿದ್ದಯ್ಯ, ಟಿ. ಶಿವಶಂಕರ್ ಗೌಡ, ಬಿ. ಅಲ್ಲಾಭಕ್ಷಿ ಸಾಹೇಬ್, ಎ.ಮಹಮದ್ ಆಲಿ, ಡಿ.  ಜಬೀವುಲ್ಲಾ, ಡಿ. ಮುಜೀಬ್, ಎ.ಅನ್ಸರ್, ಬಿ. ಅಬ್ದುಲ್ ಅಲೀಮ್, ಬಿ. ಇಮಾಮ್ ಸಾಹೇಬ್, ಎ. ರಾಜಸಾಹೇಬ್, ಡಂಕಿ ಇಮ್ರಾನ್‌ ಖಾನ್‌, ಡಿ. ತೋಷಿಪ್, ಓ. ಹಯಾತ್, ಟಿ. ಸಲಿಂ, ಎಚ್. ಅಕ್ರಂ, ಕೆ. ಸಿಕಂದರ್, ಡಿ. ಅಬ್ದುಲ್ ವಾಹಿದ್, ಎ. ಶೇಖರ್ ಆಲಿ, ರಿಯಾಜ್, ಆಸೀಪ್, ಅಲಂಕಮ್, ಅಭು, ಅತೀಖ್, ಪಾರುಖ್, ಜಿಯಾ, ಡಿ. ರಿಯಾಜ್, ಟಿ. ಮುಸಾವರ್, ಸಾಧಿಖ್, ಸಾಲ್ಮಾನ್, ಇರ್ಫಾನ್, ನಯೀಮ್, ಕಲೀಂ, ಪಾಜಿಲ್, ಪಾಹಿಮ್, ಅನಜರ್, ಸೇರಿದಂತೆ ಇತರರು ಇದ್ದರು.

error: Content is protected !!