ಹರಿಹರ, ಮಾ. 23 – ನಗರದ ಗಾಂಧಿ ಮೈದಾನದಲ್ಲಿ ಗ್ರಾಮ ದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯನ್ನು ಕಾಗಿನಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಗುತ್ತೂರು ಹಾಲೇಶ್ ಗೌಡ್ರು, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಇತರರು ಕುಸ್ತಿ ಪಟುಗಳಿಗೆ ಶುಭಾ ಹಾರೈಸುವ ಮೂಲಕ ಕೊನೆಯ ದಿನದ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದರು.
ಪ್ರಥಮ ಕುಸ್ತಿ ಪಂದ್ಯದಲ್ಲಿ ಇರಾನ್ ಕುಸ್ತಿ ಪಟು ಸೊಹಿಲ್ ಮತ್ತು ಉತ್ತರ ಪ್ರದೇಶದ ಉಮೇಶ್ ಮಥುರಾರವರ ನಡುವೆ 1.5 ಲಕ್ಷ ನಗದು ಮತ್ತು ಒಂದು ಕೆ.ಜಿ. ಬೆಳ್ಳಿ ಗದೆಗಾಗಿ ನಡೆದ ಜಿದ್ದಾ ಜಿದ್ದಿನ ಕುಸ್ತಿ ಪಂದ್ಯದಲ್ಲಿ ಉತ್ತರ ಪ್ರದೇಶ ಮಥುರ ಉಮೇಶ್ ಜಯ ಗಳಿಸಿದರು ಹಾಗೂ ಎರಡನೇ ಕುಸ್ತಿ ಪಂದ್ಯದಲ್ಲಿ ಉತ್ತರ ಪ್ರದೇಶದ ಮಥುರ ಅಂಕಿತ್ ಹಾಗೂ ಹರಿಯಾಣದ ಪವನ್ ಕುಮಾರ್ ರವರ ನಡೆದ ಪಂದ್ಯದಲ್ಲಿ ಅಂಕಿತ್ ಜಯ ಗಳಿಸುವ ಮೂಲಕ ಕುಸ್ತಿ ಪ್ರೇಮಿಗಳಿಗೆ ಆಕರ್ಷಣೀಯವಾದರು.
ಮೂರು ದಿನಗಳ ಕಾಲ ನಡೆದ ಕುಸ್ತಿ ಪಂದ್ಯದಲ್ಲಿ ನಗರದ ರಾಜು ಪೈಲ್ವಾನ್, ಸುಬ್ರಮಣ್ಯ ಪೈಲ್ವಾನ್, ವಿಜಯಕುಮಾರ್ ಪೈಲ್ವಾನ್ ವಾಗೀಶ್ ಪೈಲ್ವಾನ್ ಇತರರು ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆ. ಜಡಿಯಪ್ಪ ಪೈ, ಹೆಚ್. ಗೋಣೆಪ್ಪ, ಪೈ. ಸುರೇಶ್ ಚಂದಪೂರ್, ಅಣ್ಣಪ್ಪ ಪೈ. ಪೈ.ಎಂ. ಹೆಚ್. ಚಂದ್ರಶೇಖರ್, ಪೈ. ರೇವಣಪ್ಪ, ನಗರಸಭೆ ಸದಸ್ಯ ಎ.ಬಿ. ವಿಜಯಕುಮಾರ್, ಪಿ.ಎನ್. ವಿರುಪಾಕ್ಷಪ್ಪ, ಮುಜಾಮಿಲ್ ಬಿಲ್ಲು, ನಾಮ ನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಕಾಂಗ್ರೆಸ್ ಮುಖಂಡ ಸಿ.ಎನ್. ಹುಲಗೇಶ್, ಹಂಚಿನ ನಾಗಪ್ಪ, ಶೇರಾಪುರ ರಾಜಪ್ಪ, ಮಂಜುನಾಥ್, ಗಿರೀಶ್, ರಾಘು ಚೌಗಲೆ, ನಾಗರಾಜ್, ಶ್ರೀನಿವಾಸ್ ಚಂದಪೂರ್, ರಾಕೇಶ್ ಹುಲಿಕಟ್ಟಿ, ಸಿದ್ದಪ್ಪ, ವೈ. ರಘು ಪತಿ, ಸದಾಶಿವ ಪೈ, ಆಸೀಪ್ ಪೈ. ಬೀರೇಶ್, ಸಿ.ಎನ್. ಮಂಜುನಾಥ್, ಕನ್ನಪ್ಪ, ಇತರರು ಹಾಜರಿದ್ದರು.