ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು : ಉಳವಯ್ಯ

ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು : ಉಳವಯ್ಯ

ದಾವಣಗೆರೆ, ಮಾ. 23- ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಆಸರೆ, ಲಯನ್ಸ್ ಕ್ಲಬ್ ವಿದ್ಯಾನಗರ, ಲಯನ್ಸ್ ಬ್ಲಡ್ ಸೆಂಟರ್, ಹೆಚ್‌ಡಿಎಫ್‌ಸಿ ಮತ್ತು ಎನ್.ಎಸ್.ಎಸ್. ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳವಯ್ಯ ಮಾತನಾಡಿ, ರಕ್ತದಾನದಿಂದ ಅನೇಕರ ಜೀವ ಉಳಿಸಬಹುದು. ರಕ್ತದಾನಕ್ಕಿಂತ ದೊಡ್ಡ ದಾನ ಬೇರೊಂದಿಲ್ಲ. ಪ್ರತಿಯೊಬ್ಬ ಆರೋಗ್ಯವಂತರೂ ರಕ್ತದಾನ ಮಾಡಬಹುದು ಎಂದರು.

ಜಿಎಂಟಿ ಕೋ-ಆರ್ಡಿನೇಟರ್ ಬೆಳ್ಳೂಡಿ ಶಿವಕುಮಾರ್, ಪ್ರಾಂತೀಯ ಅಧ್ಯಕ್ಷ  ವೈ.ಬಿ. ಸತೀಶ್, ಆಸರೆ ಲಯನ್ಸ್ ಕ್ಲಬ್ ಅಧ್ಯಕ್ಷ ಮೌನೇಶ್, ಖಜಾಂಚಿ ಎಸ್. ನಾಗರಾಜ್ ಮತ್ತು ಇತರರು  ಪಾಲ್ಗೊಂಡಿದ್ದರು.

error: Content is protected !!