ದಾವಣಗೆರೆ, ಮಾ. 23- ಸ್ಥಳೀಯ ವಿನೋಬನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಸದಸ್ಯ ಲಕ್ಷ್ಮಣರಾವ್ ಸಾಳಂಕಿ ಅವರು ಸುಮಾರು 5 ತಿಂಗಳುಗಳ ಕಾಲ ಸುಮಾರು 6800 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ 10 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದು, ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಗೌರವ ಅಧ್ಯಕ್ಷ ಕೆ.ಜಿ.ಶಿವಮೂರ್ತಿ, ಕಾರ್ಯದರ್ಶಿ ಎಸ್.ಮಂಜುನಾಥ, ಖಜಾಂಚಿ ಹೆಚ್.ದಿವಾಕರ್ ವಕೀಲರು, ಸಹ ಕಾರ್ಯದರ್ಶಿ ಮಹದೇವಪ್ಪ, ಉಪಾಧ್ಯಕ್ಷ ಹುಲ್ಲೇಶಪ್ಪ, ತಿಮ್ಮಣ್ಣ, ಸಿದ್ದಪ್ಪ, ತಿಮ್ಮಣ್ಣ ವಿಜಯಕುಮಾರ್, ನೀಲಕಂಠಪ್ಪ, ಚನ್ನಬಸಪ್ಪ ಮತ್ತು ಇತರೆ ಸದಸ್ಯರು ಹಾಜರಿದ್ದರು.