ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಲಿ

ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಲಿ

ಜಗಳೂರಿನಲ್ಲಿ ಯುವ ಕರ್ನಾಟಕ ವೇದಿಕೆ ಪ್ರತಿಭಟನೆ

ಜಗಳೂರು, ಮಾ.23- ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಕೊನೆಯಾಗಬೇಕು ಮತ್ತು ಕನ್ನಡಿಗರಿಗೆ ಕಾನೂನು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಯುವ ಕರ್ನಾಟಕ ವೇದಿಕೆ ಶನಿವಾರ ಪ್ರತಿಭಟನೆ ನಡೆಸಿತು.

ಇಲ್ಲಿನ ಮಹಾತ್ಮಗಾಂಧಿ ವೃತ್ತಕ್ಕೆ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.

ಮಹಾತ್ಮಾ ಗಾಂಧಿ ವೃತ್ತದಿಂದ ಅಂಬೇ ಡ್ಕರ್ ವೃತ್ತದ ಮೂಲಕ ಪ್ರತಿಭಟನಾ ಮೆರವ ಣಿಗೆ ನಡೆಸಿದ ಹೋರಾಟಗಾರರು ತಹಶೀ ಲ್ದಾರ್‌ ಕಚೇರಿಗೆ ಲಗ್ಗೆ ಇಟ್ಟು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ್‌ ಅವರು, ರಾಜ್ಯದಲ್ಲಿ ಕನ್ನಡಿಗರ ಮೇಲೆ ಹೊರ ರಾಜ್ಯದವರಿಂದ ಸಾಕಷ್ಟು ಕಿರುಕುಳ ಹಾಗೂ ನಿರಂತರ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ಇದು ನಿಲ್ಲಬೇಕು ಎಂದರು.

ಸಂಘಟನೆ ಉಪಾಧ್ಯಕ್ಷ ಮರೇನಹಳ್ಳಿ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಕನ್ನಡಿ ಗರನ್ನು ವಿರೋಧಿಸುತ್ತಿರುವ ಮರಾಠಿಗರ ಸಂಘಟನೆಗಳನ್ನು ರದ್ದುಪಡಿಸಬೇಕು. ರಾಜ್ಯದಲ್ಲಿ ನೆಲ-ಜಲ ಹಾಗೂ ಸಂಸ್ಕೃತಿ ಉಳಿವಿಗಾಗಿ ಕನ್ನಡದ ಮನಸ್ಸುಗಳು ಒಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ನರಸಿಂಹ, ಪ್ರವೀಣ್, ಶ್ರೀಕಾಂತ್, ಪ್ರಹ್ಲಾದ್, ಸತೀಶ್ ಮಲೆಮಾಚಿಕೆರೆ, ಧನ್ಯಕುಮಾರ್, ಮಾದಿಹಳ್ಳಿ ಮಂಜುನಾಥ್, ಕುಮಾರ್ ಭರಮಸಮುದ್ರ, ರಾಜು ರಾಜನಹಟ್ಟಿ, ಸತ್ಯಮೂರ್ತಿ, ಬಸವರಾಜ್ ಸಿದ್ದಮ್ಮನಹಳ್ಳಿ, ರವಿ ಲಿಂಗಣ್ಣನಹಳ್ಳಿ ಇತರರು ಇದ್ದರು.

error: Content is protected !!