ಕನ್ನಡ ಸಮ್ಮೇಳನದ ವೆಬ್‌ಸೈಟ್ ಲೋಕಾರ್ಪಣೆ

ಕನ್ನಡ ಸಮ್ಮೇಳನದ ವೆಬ್‌ಸೈಟ್ ಲೋಕಾರ್ಪಣೆ

ಬೆಂಗಳೂರು, ಮಾ.23- ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕನ್ನಡಿಗರ ಟ್ರಸ್ಟ್ ಹಾಗೂ ವಿಕಾಸ ಎಕ್ಸ್‌ಪೋ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ  ಮುಂಬರುವ ಮೇ ತಿಂಗಳ 7ರಿಂದ 12ರವರೆಗೆ 6 ದಿನಗಳ ಕಾಲ ನಡೆಯಲಿರುವ ಕನ್ನಡ ಸಮ್ಮೇಳನ ಹಾಗೂ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮದ ಕುರಿತಂತೆ ವೆಬ್‌ಸೈಟನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಬೆಂಗಳೂರಿ ನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿದರು. 

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ಗಾಯಕ ಗುರುರಾಜ ಹೊಸಕೋಟೆ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಮನು ಬಳಿಗಾರ್,  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇಭಾ ರಾಮಲಿಂಗ ಶೆಟ್ಟಿ,  ಕನ್ನಡಪರ ಸಂಘಟಕ ಆನಂದಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.  

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ ಈ ಸಮಾರಂಭವು ಹಲವು ವಿಶೇಷತೆಗಳನ್ನೊಳಗೊಂಡು ನಡೆಯಲಿದೆ. ಸಾಹಿತ್ಯ ಮೇಳ, ಯೂಟ್ಯೂಬರ್ಸ್ ಮೇಳ, ಶಿಕ್ಷಣ ಮೇಳ, ಸಿನಿ ಸಾಹಿತ್ಯ-ಕಲಾವಿದರ ಮೇಳ, ಕೃಷಿ ಮೇಳ, ಉದ್ಯೋಗ ಮೇಳ, ಪುಸ್ತಕ ಪ್ರದರ್ಶನ-ಮಾರಾಟ ಮೇಳ, ವಸ್ತು ಪ್ರದರ್ಶನ ಮೇಳ, ವಿವಿಧ ವಿಚಾರ ಸಂಕಿರಣಗಳು ಹೀಗೆ ಹತ್ತು ಹಲವು ವಿಶೇಷತೆಗಳಿರುವ ಈ 6 ದಿನಗಳ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ವಿಶ್ವ ಕನ್ನಡಿಗರಿಗೆ ಒದಗಿಸುವ ಉದ್ದೇಶದಿಂದ ಈ ವೆಬ್‌ಸೈಟ್ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಮಾಹಿತಿ ನೀಡಿದರು.

error: Content is protected !!