ದಾವಣಗೆರೆ, ಮಾ. 23 – ಶ್ರೀ ಅಕ್ಕಮಹಾದೇವಿ ಸಮಾಜದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹುಣ್ಣಿಮೆ ಕಾರ್ಯಕ್ರಮ ಜರುಗಿತು. ಸ್ವಾವಲಂಬಿಗಳಾಗಿ ಸಾಧನೆಗೈದ ಉಮಾ ಪರಮೇಶ್ವರಪ್ಪ ಇವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಂಚಿಕೆರೆ ಸುಶೀಲಮ್ಮ, ದೊಗ್ಗಳ್ಳಿ ಸುವರ್ಣಮ್ಮ, ನೀಲಗುಂದ ಜಯಮ್ಮ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಸಮಾಜದಲ್ಲಿ ಮಹಿಳಾ ದಿನಾಚರಣೆ
