ದಾವಣಗೆರೆ,ಮಾ.23- ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಮತ್ತು ಬೆಂಗಳೂರು ಇಂಟ್ರಾಸೆಕ್ಟ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದೊಂದಿಗೆ ಕೆರೆಬಿಳಚಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೆಚ್ಚುಡುಪುಗಳನ್ನು (ಸ್ವೆಟರ್) ವಿತರಿಸಲಾಯಿತು. ಚನ್ನಗಿರಿ ತಾಲ್ಲೂಕು ದಂಡಾಧಿಕಾರಿ ಜೆ.ಎನ್. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂತೇಬೆನ್ನೂರು ವರ್ತಕರ ಸಂಘದ ಅಧ್ಯಕ್ಷ ಕೆ. ಸಿರಾಜ್ ಅಹಮ್ಮದ್, ದಾನಿ ಗೌರಿಬಿದನೂರು ನಾಗರಾಜ್ ಆಗಮಿಸಿದ್ದರು. ಪ್ರಭು ಗೊಲ್ಲರಹಳ್ಳಿ ಶಾಲೆಯ ಮಕ್ಕಳಿಗೆ ಬೆಚ್ಚುಡುಪುಗಳನ್ನು ವಿತರಿಸಿದರು. ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಗಣೇಶ್, ಶಾಕೀರ್ ಉಲ್ಲಾ ಶರೀಫ್, ಅಲ್ತಾಫ್ ರಜವಿ, ಮುಖ್ಯ ಶಿಕ್ಷಕ ಹ್ಯಾಫೀಜುರ್ ರೆಹಮಾನ್, ಸಿಆರ್‌ಪಿಗಳಾದ ಫಾಸಿಲ್ ಖಾನ್, ಅಸ್ಗರ್ ಅಲಿ, ರಾಜ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಕೆರೆಬಿಳಚಿ ಸರ್ಕಾರಿ ಶಾಲೆ ಮಕ್ಕಳಿಗೆ ಸ್ವೆಟರ್ ವಿತರಣೆ
