ಸ್ನೇಹ ಮಹಿಳಾ ಬಳಗದಿಂದ ಮಹಿಳಾ ದಿನಾಚರಣೆ

ಸ್ನೇಹ ಮಹಿಳಾ ಬಳಗದಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 23- ಸ್ನೇಹ ಮಹಿಳಾ ಬಳಗದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.  

ಉಪನ್ಯಾಸಕರೂ, ಸಾಹಿತಿಯೂ ಆದ ಡಾ. ಗೀತಾ ಬಸವರಾಜ್ ಉಪಸ್ಥಿತರಿದ್ದು ಮಾತನಾಡುತ್ತಾ, ಹಿಂದಿನ ಮಹಿಳೆಯರ ಹಾಗೂ ಇಂದಿನ ಮಹಿಳೆಯರ 
ಅರಿವು, ಜ್ಞಾನ, ತ್ಯಾಗ, ಸಮಯೋಜಿತ ಆಲೋಚನೆ ಹಾಗೂ ದಿಟ್ಟತನದ ಕುರಿತು ಅನೇಕ ನಿದರ್ಶನಗಳ ಮೂಲಕ ಅನೇಕ ವಿಚಾರಗಳನ್ನು ತಿಳಿಸಿದರು. 

ರಾಷ್ಟ್ರಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ, ಇನ್ನೂ ಅನೇಕ ಹಿರಿಯ ಸಾಹಿತಿಗಳು ತಮ್ಮ ಹಾಡಿನ ರಚನೆಗಳನ್ನು ಮಹಿಳೆಯರ ವ್ಯಕ್ತಿತ್ವ, ಪ್ರೀತಿ, ಶಕ್ತಿ, ಸಹನಶೀಲತೆ ಬಗ್ಗೆ ಹಾಡಿ ಹೊಗಳಿರುವುದನ್ನು ನೆನೆದರು ಮತ್ತು ಮಹಿಳೆಯರ ಬಗ್ಗೆ ಉತ್ತಮ ಮಾತುಗಳನ್ನಾಡಿದರು.

ಬಡತನದಲ್ಲಿ ಮನೆ ಮನೆಗೆ ಹೋಗಿ ಅಡುಗೆ ಮಾಡಿ, ತನ್ನ ಸಂಸಾರದ ಜವಾಬ್ದಾರಿ ಹೊತ್ತು ಕುಟುಂಬವನ್ನು ನೆಲೆ ನಿಲ್ಲಿಸಿರುವ ಕಷ್ಟ ಜೀವಿ ಶ್ರೀಮತಿ ಸುವರ್ಣಮ್ಮ ಅವರನ್ನು ಇದೇ ಸಂದರ್ಭಲ್ಲಿ ಸನ್ಮಾನಿಸಲಾಯಿತು. 

ಮಂಜುಳಾ ಬಸವಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ರೂಪಾ ಸತೀಶ್ ಪ್ರಾರ್ಥಿಸಿದರು. ಶೋಭಾ ರವಿ, ನಾಗರತ್ನ ಮಹೇಶ್,  ತುಳಸಿ ಮಹೇಶ್, ಸುವರ್ಣ ದೊಗ್ಗಳ್ಳಿ, ಚೇತನ ಲಿಂಗರಾಜು, ನೇತ್ರಾ ವೆರ್ಣೇಕರ್, ಉಮಾ ಎಸ್. ಮೂರ್ತಿ, ರೇಖಾ ಸುದರ್ಶನ್, ನರ್ಮದಾ, ಅನುಸೂಯ ಮಲ್ಲೇಶ್, ಪುಷ್ಪಾ ರವಿ, ಜಯಶ್ರೀ, ಲೀಲಾವತಿ, ರಾಜೇಶ್ವರಿ ಏಕಬೋಟೆ ಕಾರ್ಯಕ್ರಮ ನಟಿಸಿಕೊಟ್ಟರು. ಸ್ತ್ರೀ ಕುರಿತು ರಚಿಸಿರುವ ಹಾಡುಗಳನ್ನು ಶ್ರೀಮತಿ ನೇತ್ರ ಹಾಡಿದರು.

error: Content is protected !!