ದಾವಣಗೆರೆ, ಮಾ. 23- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆ ಕದಳಿ ಮಹಿಳಾ ವೇದಿಕೆಯ 164ನೇ ಕದಳಿ ಕಮ್ಮಟ ಹಾಗೂ ದತ್ತಿ ಶರಣೆ ಲಿಂ. ಗಂಗಮ್ಮ ಸಿದ್ದಬಸಪ್ಪ ಮತ್ತು ಶರಣ ಲಿಂ. ಬಿ. ಸಿದ್ದಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಶರಣ ಸಾಹಿತ್ಯ ಮತ್ತು ಮಾನವೀಯ ಸೇವೆ ಎಂಬ ವಿಷಯದ ಬಗ್ಗೆ ಉಪನ್ಯಾಸಕರೂ, ಸಾಹಿತಿಯೂ ಆದ ಡಾ. ಹೆಚ್. ಅನಿತಾ ದೊಡ್ಡ ಗೌಡರ್ ಅವರು ಶರಣರ ಆಚಾರ ವಿಚಾರಗಳು ಮತ್ತು ತತ್ವ ಪಾಲನೆಯ ಬಗ್ಗೆ, ಮಾನವೀಯ ಮೌಲ್ಯಗಳ ಬಗ್ಗೆ ವಿಸ್ತಾರವಾಗಿ ಮಕ್ಕಳಿಗೆ ಮನಮುಟ್ಟುವಂತೆ ಅನುಭಾವವನ್ನು ನೀಡಿದರು.
ದತ್ತಿ ದಾನಿ ವೈ.ಎಸ್. ನಟರಾಜ್ ಅವರು ತಮ್ಮ ಮಾತಾ – ಪಿತೃಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ವೇತಾ ಪಾಟೀಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಹಿಳೆಯ ಪಾತ್ರ ಸಮಾಜಕ್ಕೆ ಎಷ್ಟು ಮುಖ್ಯ ಎನ್ನುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಗಾಯತ್ರಿ ವಸ್ತ್ರದ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೌಮ್ಯ ಸತೀಶ್ ಸ್ವಾಗತಿಸಿದ ರು. ನಿರ್ಮಲ ಶಿವಕುಮಾರ್ ದತ್ತಿ ದಾನಿಗಳನ್ನು ಪರಿಚಯಿಸಿದರು. ರತ್ನ ರೆಡ್ಡಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವಾಣಿ ರಾಜ ನಿರೂಪಿಸಿದರು. ಪ್ರಮೀಳಾ ನಟರಾಜ್, ಕೆ.ಬಿ. ಪರಮೇಶ್ವರಪ್ಪ, ಮಮತಾ ನಾಗರಾಜ್, ರುದ್ರಮುನಿ, ಪರಮೇಶ್ವರಪ್ಪ ಸಿರಿಗೆರೆ, ಬುಳ್ಳಾಪುರ ಮಲ್ಲಿಕಾರ್ಜುನಪ್ಪ, ವಿನೋದ ಅಜಗಣ್ಣನವರ, ಕುಸುಮಾ ಲೋಕೇಶ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.