ದಾವಣಗೆರೆ, ಮಾ.9- ಪಾಲಕರಿಗೆ ಆರ್ಥಿಕ ಹೊರೆ ಆಗದ ರೀತಿಯಲ್ಲಿ ಶಾಲೆಗಳು ಶಿಕ್ಷಣ ಒದಗಿಸಬೇಕು. ಈ ನಿಟ್ಟಿನಲ್ಲಿ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆ ನಡೆದುಕೊಳ್ಳುತ್ತಿದೆ ಎಂದು ಆರ್.ಎಲ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ. ವಿದ್ಯಾಧರ ವೇದವರ್ಮ ತಿಳಿಸಿದರು.
ಸಮೀಪದ ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ಈಚೆಗೆ ಶಾರದಾ ಪೂಜೆ, ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ ಹಾಗೂ 10ನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಈ ಶಾಲೆ ಹೊಂದಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಓದಿನಲ್ಲಿ ಗಮನಹರಿಸಿ ಉತ್ತಮ ಸಾಧನೆ ಮಾಡುವಂತೆ ಕಿವಿಮಾತು ಹೇಳಿದರು.
ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಮಕ್ಕಳಿಗೆ ಈ ಶಾಲೆ ಅನುಕೂಲಕರವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಲ್ಲಿಯೇ ಪದವಿ ಪೂರ್ವ ಕಾಲೇಜನ್ನು ತೆರೆಯಲು ಮುಂದಾದರೆ ನಮ್ಮೆಲ್ಲರ ಹಾರೈಕೆ, ಪ್ರೋತ್ಸಾಹ ಇರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಎ.ಹೆಚ್ ಲಕ್ಷ್ಮಿಛಾಯ, ನಿರ್ದೇಶಕರಾದ ಎ.ಹೆಚ್. ಸುಗ್ಗಲಾದೇವಿ, ಕಾರ್ಯದರ್ಶಿ ಎ.ಹೆಚ್. ಸಿದ್ದಲಿಂಗಸ್ವಾಮಿ ಇದ್ದರು.