ಮಹಿಳೆ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ

ಮಹಿಳೆ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ

ಆವರಗೆರೆ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಎ.ಹೆಚ್.ಸುಗ್ಗಲಾದೇವಿ ಕಳವಳ

ದಾವಣಗೆರೆ, ಮಾ.9- ಪುರುಷರ ಸಮಾನವಾಗಿ ಮಹಿಳೆ ದುಡಿಯುತ್ತಿದ್ದರೂ ಅವಳನ್ನು ಸಮಾನತೆಯ ದಾರಿಯ ಕಡೆ ಕರೆತರುವಲ್ಲಿ  ಸಾಧ್ಯವಾಗಿಲ್ಲ.  ಗ್ರಾಮೀಣ ಮಹಿಳೆಯರ ಸ್ಥಿತಿ ಇನ್ನೂ ಭಿನ್ನವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಿಂತಿಲ್ಲ   ಎಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಎ.ಹೆಚ್.ಸುಗ್ಗಲಾದೇವಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತವಾಗಿ   ನಗರದ ಆವರಗೆರೆಯ ಗೋಶಾಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದನ್ನು ನೋಡಿದಾಗ ಮಹಿಳೆ ಇನ್ನು ಸುರಕ್ಷಿತವಾಗಿಲ್ಲವೆಂದು ತಿಳಿಯುತ್ತದೆ. ಈ ಸಮಸ್ಯೆಗಳ ಮಧ್ಯೆಯೂ ನಮ್ಮ ನಡುವಿನ ಶ್ರೀಮತಿ ಸುಧಾಮೂರ್ತಿ ನಮಗೆಲ್ಲಾ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.   14 ಸಾವಿರ ಮಹಿಳೆಯರ ಶೌಚಾಲಯಕ್ಕೆ ಆರ್ಥಿಕ ನೆರವು ನೀಡಿ, ಸ್ತ್ರೀವಾದಿ ಚಿಂತಕಿಯಾಗಿದ್ದಾರೆಂದು ತಿಳಿಸಿದರು. ವಿದ್ಯೆಯು ಮಹಿಳೆಯರನ್ನು ಸಬಲರನ್ನಾಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಉನ್ನತ ವಿದ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಕೋರಿದರು.

ಉತ್ತರ ವಲಯದ ಬಿ.ಐ.ಇ.ಟಿ   ಎಸ್. ರೇವಮ್ಮ, ಜಿಲ್ಲಾ ಬಾಲಭವನ ಸಂಯೋಜಕಿ ಎಸ್.ಬಿ.ಶಿಲ್ಪ, ಗೋಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ವಿಜಯಲತ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ಹೇಮಲತ ಅಧ್ಯಕ್ಷತೆ ವಹಿಸಿದ್ದರು. 

ಶ್ರೀಮತಿ ನಾಗರತ್ನ ಸ್ವಾಗತಿಸಿದರು. ಎಂ.ಗುರುಸಿದ್ಧಸ್ವಾಮಿ ವಂದಿಸಿದರು. ಆವರಗೆರೆ ಆಶಾ ಕಾರ್ಯಕರ್ತೆಯರನ್ನು  ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ   ಶಿಕ್ಷಕಿಯರಿಗೆ ಬಹುಮಾನ ನೀಡಿ, ಗೌರವಿಸಲಾಯಿತು.

error: Content is protected !!