ದಾವಣಗೆರೆ, ಮಾ. 8 – ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟದ ವತಿಯಿಂದ ಇತ್ತೀಚಿಗೆ ಕಾರ್ಯಕಾರಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನಿಕಟ ಪೂರ್ವ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಗೌರವಾಧ್ಯಕ್ಷರುಗಳಾಗಿ ಚಿಂದೋಡಿ ಶಂಭುಲಿಂಗಪ್ಪ, ಕೆ. ವೀರಯ್ಯಸ್ವಾಮಿ, ಅಧ್ಯಕ್ಷರಾಗಿ ಹೆಚ್. ಶಶಿಧರ್, ಉಪಾಧ್ಯಕ್ಷರಾಗಿ ಮೌಲಾಸಾಬ್ ಗುಡಿಗೇರಿ, ಶಶಿಕಲಾ, ಸಂಘಟನಾ ಕಾರ್ಯದರ್ಶಿ ಯಾಗಿ ನೀಲಗುಂದ ಬಸವನ ಗೌಡ್ರು, ಪ್ರಧಾನ ಕಾರ್ಯದ ರ್ಶಿಯಾಗಿ ಕೆ.ಎಸ್. ಕೊಟ್ರೇಶ್, ಸಹಕಾರ್ಯದರ್ಶಿಯಾಗಿ ಖಾದರ್ ಪಿ., ಖಜಾಂಚಿಯಾಗಿ ಸಾವಿತ್ರಮ್ಮ ರಿತ್ತಿ ,ಗೌರವ ಸಲಹೆಗಾರರಾಗಿ ಅಹಮದ್ ಷರೀಫ್, ನಿರ್ದೇಶಕರುಗಳಾಗಿ ಶಿವಕುಮಾರ್ ಅಕ್ಕಿ, ಕೆ.ಬಿ. ಶೇಠ್, ಜ್ಯೋತಿ ಕಲಾ, ಗಿರಿಜಮ್ಮ ಸೊಟ್ಟಪ್ಪನವರ್, ಸೌಮ್ಯಶ್ರೀ, ಶ್ರೀನಿವಾಸ ರಿತ್ತಿ, ಡಿ.ಜಿ. ನಾಗರಾಜ್, ಅರುಣ್ ಕುಮಾರ್ ಬಸಾಪುರ, ಪ್ರಭು ಹಡಪದ, ವೆಂಕಟೇಶ್ ಮತ್ತಿಹಳ್ಳಿ, ಗುರು ಕೋಲ್ಕುಂಟೆ, ಅಮರೇಶ್ ಸಂಗಮ, ಮೌನೇಶ್ ಕಲ್ಲಳ್ಳಿ, ಮಾನಾಚಾರಿ ಹಾನಗಲ್, ಮೌಲಾಖಾನ್ ಮಹಬೂಬ್ ಖಾನ್ ಚಿಲ್ಲೂರು ಇವರು ಗಳನ್ನು ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಕೆ. ವೀರಯ್ಯಸ್ವಾಮಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಬಲಗೊಳಿಸಿ ಸಂಘವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯುವಂತಹ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಿ ಎಂದು ಹಾರೈಸಿದರು. ಸರ್ವ ಸದಸ್ಯರುಗಳು ಹಾಜರಿದ್ದರು.