ದಾವಣಗೆರೆ, ಮಾ. 10-ನಗರದ ಮಾಂಟೆಸೊರಿ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನವನ್ನು ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ ಉದ್ಘಾಟಿಸಿದರು.
ವಸ್ತುಪ್ರದರ್ಶನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ದಕ್ಷಿಣ ವಲಯದ ಸಂಪನ್ಮೂಲ ವ್ಯಕ್ತಿ ಕೆ. ನಾಗರಾಜ್ ರಾಕೆಟ್ ಹಾರಿಸುವುದರ ಮೂಲಕ ಉದ್ಘಾಟಿಸಿದರು.
ಮಕ್ಕಳ ಈ ಸಾಧನೆಯನ್ನು ಶ್ಲ್ಯಾಘಿಸಿದ ಅತಿಥಿಗಳು, ಚಿಕ್ಕಂದಿನಲ್ಲೇ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಹಾಗೂ ಅದನ್ನು ಸಾಧಿಸಲು ಸತತವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಮತ್ತೊಬ್ಬ ಅತಿಥಿ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ ಶಶಿಕಲಾ ಪ್ರಾಥಮಿಕ ಶಿಕ್ಷಣದ ಪ್ರಾಮುಖ್ಯತೆ ವಿವರಿಸಿದರು.
ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಎಸ್.ಎಂ ಮಲ್ಲಮ್ಮ, ಕೋ-ಆರ್ಡಿನೇಟರ್ ಶ್ರೀಮತಿ ರಾಬಿಯಾ ಬಸ್ರಿ ಹಾಗೂ ಮುಖ್ಯೋಪಾಧ್ಯಾಯ ಮಹಮದ್ ಫರ್ಹಾನ್ ಉಪಸ್ಥಿತರಿದ್ದರು.
ಬಾಲಭವನದ ಕಾರ್ಯದರ್ಶಿಗಳಾದ ಶ್ರೀಮತಿ ಶಿಲ್ಪ ಹಾಗೂ ಶ್ರೀಮತಿ ಲತಾ ವಸ್ತುಪ್ರದರ್ಶನ ವೀಕ್ಷಿಸಿ ಅತ್ಯುತ್ತಮ ಪ್ರಯೋಗ ತಯಾರಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದರು.