ಹಂಪಿ ಉತ್ಸವದಲ್ಲಿ ಪೃಥ್ವಿ ಐಗೂರ್ ಹಿಂದೂಸ್ತಾನಿ ಗಾಯನ

ಹಂಪಿ ಉತ್ಸವದಲ್ಲಿ ಪೃಥ್ವಿ ಐಗೂರ್ ಹಿಂದೂಸ್ತಾನಿ ಗಾಯನ

ದಾವಣಗೆರೆ, ಮಾ.7- ಹಂಪಿ ಉತ್ಸವದ ಅಂಗವಾಗಿ ನಗರದ ಡಾ. ಪೃಥ್ವಿ ಐಗೂರ್ ಅವರು ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿ ನೆರೆದ ಸಂಗೀತ ಕಲಾಸಕ್ತರ ಗಮನ ಸೆಳೆದರು. ಸ್ವತಃ ಹಾರ್ಮೋನಿಯಂ ನುಡಿಸಿ ಡಾ.ಪೃಥ್ವಿ ಹಾಡಿದರು. ಅವರಿಗೆ ತಬಲಾ ಸಾಥ್ ಶಿವರುದ್ರಾಚಾರ್, ತಂಬೂರಿ ಸಾಥ್ ಗೀತಾ ತಿಪ್ಪೇಸ್ವಾಮಿ ಹಾಗೂ ತಾಳವಾದ್ಯ ಸಾಥ್ ತಿಪ್ಪೇಸ್ವಾಮಿ ನೀಡಿದರು.  ಡಾ. ಪೃಥ್ವಿ, ಸಂಗೀತ ಗುರು ಭೀಮಸೇನ ಜೋಶಿಯವರ ಶಿಷ್ಯೆ ಹಾಗೂ ಸಾಹಿತಿ ಶ್ರೀಮತಿ ಗೀತಾ ಮತ್ತು ತಿಪ್ಪೇಸ್ವಾಮಿ ಐಗೂರು ದಂಪತಿ ಪುತ್ರಿ.

error: Content is protected !!