ದಾವಣಗೆರೆ, ಮಾ.7- ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ನಾಡಿದ್ದು ದಿನಾಂಕ 9ರ ಭಾನುವಾರ ರಾತ್ರಿ 12 ಗಂಟೆಗೆ ಜರುಗಲಿದೆ.
ಇಂದು ಕಂಕಣಧಾರಣೆ ನೆರವೇರಿತು. ದಿನಾಂಕ 10ರ ಸೋಮವಾರ ಬೆಲ್ಲದ ಬಂಡಿ ಉತ್ಸವ ಏರ್ಪಾಡಾಗಿದೆ. ದಿನಾಂಕ 11ರ ಮಂಗಳವಾರ ಓಕುಳಿ ನಡೆಯಲಿದೆ.
ದಿನಾಂಕ 11ರ ಮಂಗಳವಾರ ಶ್ರೀ ಮಾರುತಿ ನಾಟ್ಯ ಕಲಾ ಸಂಘದಿಂದ ಶ್ಯಾಬನೂರಿನ ಬಸವೇಶ್ವರ ರಂಗಮಂದಿರದಲ್ಲಿ ರಾತ್ರಿ 9.30ಕ್ಕೆ ಕೆ.ಎಸ್. ಗಿರೀಶ್ ಶಾಮನೂರು ವಿರಚಿತ `ಹಕ್ಕಿಯ ಗೂಡಿಗೆ ಕಣ್ಣಿಟ್ಟ ಹದ್ದು’ ಹಾಗೂ ದಿನಾಂಕ 12ರ ಬುಧವಾರ ದುರ್ಗಾಂಬಿಕಾ ಕಲಾ ಸ್ನೇಹ ಬಳ ಗದಿಂದ `ನೇಗಿಲಿಗೆ ಸಿಂಗಾರ, ರೈತನಿಗೆ ಬಂಗಾರ’ ನಾಟಕ ಪ್ರದರ್ಶನಗೊಳ್ಳಲಿವೆ.