ಸರ್ವಸ್ಪರ್ಶಿ ಬಜೆಟ್ : ಶಾಸಕ ಬಸವಂತಪ್ಪ

ಸರ್ವಸ್ಪರ್ಶಿ ಬಜೆಟ್ : ಶಾಸಕ ಬಸವಂತಪ್ಪ

ಮಾಯಕೊಂಡ, ಮಾ.7- ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಯಶಸ್ವಿಯಾಗಿ 16ನೇ ಬಜೆಟ್ ಮಂಡಿಸಿದ್ದು, ಎಲ್ಲಾ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ ಎಂದು ಶಾಸಕ ಕೆ.ಎಸ್‌. ಬಸವಂತಪ್ಪ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ವಿಶೇಷ ಒತ್ತು ನೀಡಿದ್ದಾರೆ. ಪಂಚ ಗ್ಯಾರಂಟಿ ಮುಂದುವರೆಸುವ ಜತೆಗೆ ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ, ಜನರ ಆರೋಗ್ಯ ರಕ್ಷಣೆಗೆ ಕ್ರಮ ವಹಿಸಲಾಗಿದೆ.

ಕಲಾವಿದರ ಮಾಸಾಶನ ಹೆಚ್ಚಳ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯ ಗೌರವ ಧನ ಹೆಚ್ಚಿಸುವ ಮೂಲಕ ದುಡಿಯುವ ವರ್ಗಕ್ಕೆ ಮನ್ನಣೆ ನೀಡಿದ್ದಾರೆ. ಇದು ಎಲ್ಲಾ ಜಾತಿ, ವರ್ಗದ ಜನರನ್ನು ಸ್ಪರ್ಶಿಸುವ ಸರ್ವಸ್ಪರ್ಶಿ ಬಜೆಟ್ ಆಗಿದೆ ಎಂದರು.

error: Content is protected !!