ಪತ್ರಿಕಾ ವಿತರಕರಿಗೆ ವಸತಿ ಯೋಜನೆ ಜಾರಿಗೆ ಸಿಎಂ ಮುಂದು

ಪತ್ರಿಕಾ ವಿತರಕರಿಗೆ ವಸತಿ ಯೋಜನೆ ಜಾರಿಗೆ ಸಿಎಂ ಮುಂದು

ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್

ಚನ್ನರಾಯಪಟ್ಟಣ, ಮಾ.6- ವಸತಿ ಯೋಜನೆ ಯನ್ನು ಪತ್ರಿಕಾ ವಿತರಕರಿಗೆ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಜಾರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.

ಪಟ್ಟಣದ ನವೋದಯ ಶಾಲಾ ಆವರಣದಲ್ಲಿ ಹಾಸನ ಜಿಲ್ಲೆ ಹಾಗೂ ತಾಲ್ಲೂಕು ಪತ್ರಿಕಾ ವಿತರಕರ ಒಕ್ಕೂಟದಿಂದ ಮೊನ್ನೆ  ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಿಕಾ ರಂಗದಲ್ಲಿ ವಿತರಕರು ನರಮಂಡಲ ವಿದ್ದಂತೆ. ಅವರು ಸಂಘಟಿತರಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದ್ರೆ ಸೌಲಭ್ಯಗಳು ದೊರೆ ಯುತ್ತವೆ. ಬರುವ ಬಜೆಟ್‌ನಲ್ಲಿ ಪತ್ರಿಕಾ ವಿತರಕರಿಗೆ ಸಾಕಷ್ಟು ಸೌಲಭ್ಯಗಳನ್ನು  ನೀಡಲು ಈಗಾಗಲೇ ಸರ್ಕಾರ ಆಲೋಚಿಸಿದೆ ಎಂದು ವಿವರಿಸಿದರು.

ಪ್ರತಿ ಕ್ಷೇತ್ರದ ಶಾಸಕರು ಮನಸ್ಸು ಮಾಡಿದರೆ ಪತ್ರಕರ್ತರಿಗೆ ಸೌಲಭ್ಯಗಳನ್ನು ನೀಡಬಹುದಾಗಿದೆ ಎಂದ ಅವರು, ವಿತರಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು, ರಾಜ್ಯದಲ್ಲಿ 7 ಸಾವಿರ ನಿವೇಶನಗಳು ರಾಷ್ಟ್ರೀಯ ಕ್ರೀಡಾಪಟು ಗಳಿಗೆ ನೀಡಬೇಕಿದ್ದು, ಫಲಾನುಭವಿಗಳು ಇಲ್ಲದೇ ಉಳಿದಿವೆ. ಇದರಲ್ಲಿ ಶೇ.50 ಮೀಸಲಾತಿ ಮಾಡಿ, ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರಿಗೆ ನೀಡಲು ಸರ್ಕಾರ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿವೇಶನ ನೀಡಬೇಕೆಂಬ ನಿಯಮವಿದೆ. ಅವರಿಗೆ ಮೀಸಲಿರಿಸಲಾಗಿದೆ. ರಾಜ್ಯದಲ್ಲಿ ಹೆಚ್ಚು ಮಂದಿ ರಾಷ್ಟ್ರೀಯ ಕ್ರೀಡಾಪಟುಗಳು ಇಲ್ಲದೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಪತ್ರಕರ್ತರಿಗೆ ಹಾಗೂ ವಿತರಕರಿಗೆ ನೀಡಬಹುದಾಗಿದೆ ಎಂದು ಹೇಳಿದರು.

ಸರ್ಕಾರ ಗ್ರಾಮೀಣ ಭಾಗದ ಪತ್ರಕರ್ತರಿಗೆ. ವಿತರಕರಿಗೆ ಕ್ಷೇಮನಿಧಿ ಸ್ಥಾಪಿಸಿ, ಪ್ರತಿ ತಾಲ್ಲೂಕಿಗೆ ಅನುದಾನ ನೀಡಬೇಕಾಗಿದೆ. ಮಾಸಿಕ ಗೌರವಧನ ಪತ್ರಕರ್ತರಿಗೆ ನೀಡಬೇಕು. ಮಾಧ್ಯಮ ಕ್ಷೇತ್ರ ಸಮೃದ್ಧಿಯಾಗಿ, ಪತ್ರಕರ್ತರು ಸಂತೋಷವಾಗಿದ್ದರೆ, ಆ ರಾಜ್ಯ ಉತ್ತಮವಾಗಿ ಆಡಳಿತ ನೀಡುತ್ತಿದೆ ಎನ್ನುವುದು ಜನಸಾಮಾನ್ಯರಿಗೆ ತಿಳಿಯುತ್ತದೆ ಎಂದರು.

ಹಿರಿಯ ಪತ್ರಿಕಾ ವಿತರಕರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕೆ ಪಡೆದ ಪತ್ರಿಕಾ ವಿತರಕರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಗೋವಿಂದರಾಜ್‌, ಡಿವೈಎಸ್ಪಿ ಕುಮಾರ್‌, ಶಾಸಕ ಸಿ.ಎನ್.ಬಾಲಕೃಷ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಒಕ್ಕೂಟದ ಅಧ್ಯಕ್ಷ ಶಂಭುಲಿಂಗ, ಜಿಲ್ಲಾಧ್ಯಕ್ಷ ಕಿರಣ್‌, ಪುಟ್ಟಣ್ಣ, ಹಿರಿಯ ಪತ್ರಕರ್ತರಾದ ಮದನ್‌ಗೌಡ, ರವಿ ನಾಕಲಗೂಡು, ಬಾಳು ಗೋಪಾಲ್‌, ಲೋಕೇಶ್‌ ಇದ್ದರು.

error: Content is protected !!