ಕರಾವಳಿ ಮಿತ್ರ ಮಂಡಳಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಕರಾವಳಿ ಮಿತ್ರ ಮಂಡಳಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ದಾವಣಗೆರೆ, ಮಾ. 6- ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಬಂಟರ ಸಂಘ ಮತ್ತು ದಾವಣಗೆರೆಯ ಕರಾವಳಿ ಮಿತ್ರ ಮಂಡಳಿಯ ಸಂಯುಕ್ತಾಶ್ರಯದಲ್ಲಿ ನಗರದ ಡಾ|| ಶ್ಯಾಮಸುಂದರ ಶೆಟ್ಟಿ ಬಂಟರ ಭವನದ `ಕರಾವಳಿ ಸೌಧ’ ಸಭಾಂಗಣದಲ್ಲಿ ಅಧ್ಯಾತ್ಮ ಪರಂಪರೆಯ ಸಾಮೂಹಿಕ  ಶ್ರೀ ಸತ್ಯನಾರಾಯಣ ಪೂಜೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತರಾದ ನಾಗರಾಜ್ ಭಟ್ ಮತ್ತು ತಂಡದಿಂದ ಶಾಸ್ತ್ರೋಕ್ತವಾಗಿ ನಡೆಯಿತು.

ಸಂಸದೆ ಡಾ|| ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷರ ದಿನೇಶ್ ಕೆ.ಶೆಟ್ಟಿ ದಂಪತಿ, ಡಾ. ಅಥಣಿ ವೀರಣ್ಣ ದಂಪತಿ, ಯಕ್ಷರಂಗದ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ದಂಪತಿ, ಭಂಟರ ಭವನದ ಅಧ್ಯಕ್ಷ ಡಾ. ಪ್ರಭಾಕರ ಶೆಟ್ಟಿ ದಂಪತಿ, ಪ್ರಧಾನ ಕಾರ್ಯದರ್ಶಿ ಆಡಿಟರ್ ಉಮೇಶ್ ಶೆಟ್ಟಿ ದಂಪತಿ, ಡಾ|| ಸುರೇಂದ್ರ ಶೆಟ್ಟಿ ದಂಪತಿ, ಡಾ|| ಶುಕ್ಲ ಶೆಟ್ಟಿ ದಂಪತಿ, ಕರಾವಳಿ ಮಿತ್ರ ಮಂಡಳಿ ಮುಖ್ಯಸ್ಥ ಸವಿಡೈನ್ ಮಹೇಶ್ ಶೆಟ್ಟಿ ದಂಪತಿ, ಅಂಕಿತ್ ಮೊಯ್ಲಿ ದಂಪತಿ, ಹರೀಶ್ ಶೆಟ್ಟಿ ದಂಪತಿ, ಸತೀಶ್ ಮೊಯ್ಲಿ ದಂಪತಿ, ಯಕ್ಷಗಾನ ಕಲಾವಿದರಾದ ಬೇಳೂರು ಸಂತೋಷ್‍ಕುಮಾರ್ ಶೆಟ್ಟಿ ದಂಪತಿ, ಗೋಪಾಲ್ ಆಚಾರ್ ದಂಪತಿ, ಅಣಬೇರು ರಾಜಣ್ಣ ದಂಪತಿ,  ಗಣೇಶ್ ಹುಲ್ಮನಿ ದಂಪತಿ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‍ಶೆಣೈ ಕುಟುಂಬ, ನಾಗಭೂಷಣ್ ದಂಪತಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಸುರೇಂದ್ರ ಮೊಯ್ಲಿ ದಂಪತಿ ಮತ್ತಿತರರು ಉಪಸ್ಥಿತರಿದ್ದರು.

ಕರಾವಳಿ ಮಿತ್ರ ಮಂಡಳಿಯ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದರು.

error: Content is protected !!