ಕನ್ಸಲ್ಟೆಂಟ್ ಇಂಜಿನಿಯರ್‌ಗಳ ಸಭೆ

ಕನ್ಸಲ್ಟೆಂಟ್ ಇಂಜಿನಿಯರ್‌ಗಳ ಸಭೆ

ದಾವಣಗೆರೆ, ಮಾ.6- ಮಹಾನಗರ ಪಾಲಿಕೆಯ ಕೌನ್ಸಿಲ್‌ ಸಭಾಂಗಣದಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಯುಎಲ್‌ಎಂಎಸ್‌ ಆನ್‌ಲೈನ್ ತಂತ್ರಾಂಶದ ಬಗ್ಗೆ ಚರ್ಚಿಸಲು ನೋಂದಾಯಿತ ಕನ್ಸಲ್ಟೆಂಟ್ ಇಂಜಿನಿಯರ್‌ಗಳ ಸಭೆ ನಿನ್ನೆ ನಡೆಯಿತು.

ಈ ವೇಳೆ ಮಾತನಾಡಿದ ಆಯುಕ್ತರಾದ ಶ್ರೀಮತಿ ರೇಣುಕಾ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ, ಕಟ್ಟಡದಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ. ಕಟ್ಟಡ ಪರವಾನಿಗೆ ಶುಲ್ಕ ಪಾವತಿಸಲು ಅನುಮೋದನೆಯಾದ ಬಳಿಕ ತಕ್ಷಣವೇ ಕಟ್ಟಡ ಪರವಾನಿಗೆ ಶುಲ್ಕ ಪಾವತಿಸಲು ಕಟ್ಟಡದ ಮಾಲೀಕರಿಗೆ ತಿಳಿಸುವ ಬಗ್ಗೆ ಹೇಳಿದರು.

ಸರ್ಕಾರದ ನಿರ್ದೇಶನದಂತೆ ಪ್ರಸ್ತುತವಿರುವ ಎಲ್‌.ಬಿ.ಪಿ.ಎ.ಎಸ್‌ ನಿರ್ಮಾಣ್ 2 ಆನ್‌ಲೈನ್ ತಂತ್ರಾಂಶದ ಪೂರಕವಾಗಿ ಯುಎಲ್‌ಎಂಎಸ್‌ ಆನ್‌ಲೈನ್‌ ತಂತ್ರಾಂಶದ ಅನುಷ್ಟಾನದ ಬಗ್ಗೆ ಸುದೀರ್ಘ ಚರ್ಚಿಸಿ, ಸಮಾಲೋಚಿಸಿ ಹಲವು ಸಲಹೆ ಸೂಚನೆ ನೀಡಿದರು. ಈ ವೇಳೆ ನಗರ ಯೋಜನಾ ಶಾಖೆಯ ಜಂಟಿ ನಿರ್ದೇಶಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಚೇರಿ ವ್ಯವಸ್ಥಾಪಕರು, ವಲಯ ಅಭಿಯಂತರರು ಇದ್ದರು.

error: Content is protected !!