ಮಲೇ ಬೆನ್ನೂರು ಸಮೀಪದ ಹಳ್ಳಿಹಾಳ್ ಗ್ರಾಮದ ಶ್ರೀ ಮುರುಡ ಬಸವೇಶ್ವರ ದೇವರ ರಥೋತ್ಸವವು ನಾಳೆ ಗುರುವಾರ ಸಂಜೆ 4 ಗಂಟೆಗೆ ಜರುಗಲಿದೆ. ಇಂದು ಬೆಳಿಗ್ಗೆ 9 ಗಂಟೆಗೆ ಉಚ್ಛಾಯ ನಡೆಯಲಿದೆ. ನಾಳೆ ಗುರುವಾರ ಸಾಯಂಕಾಲ 4 ಗಂಟೆಗೆ ರಥೋತ್ಸವ ಜರುಗಲಿದೆ. ದಿನಾಂಕ 7ರ ಶುಕ್ರವಾರ ಸಂಜೆ 5 ಗಂಟೆಗೆ ಓಕಳಿಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ ಎಂದು ಗ್ರಾಮದ ಹೆಚ್. ವೀರನಗೌಡ ಮತ್ತು ಯು.ಎನ್. ಶಿವನಗೌಡ ತಿಳಿಸಿದ್ದಾರೆ.
ಹಳ್ಳಿಹಾಳ್ : ನಾಳೆ ಮುರುಡ ಬಸವೇಶ್ವರ ತೇರು
