ದಾವಣಗೆರೆ, ಮಾ. 4- ಬಡವರು, ನಿರ್ಗತಿಕರು, ಅಶಕ್ತರಿಗೆ ಯಾರೂ ನೆರವಾಗುತ್ತಾರೋ ಅಂತವರಿಗೂ ಒಳಿತಾಗುತ್ತದೆ. ದಾಸೋಹ ಸೇವೆಯಿಂದ ದೇವರು ಸಹ ಸಂತೃಪ್ತನಾಗುತ್ತಾನೆ. ದಾಸೋಹ ನಡೆಸುವ ಮನೆ ಕೈಲಾಸವಾಗಿರುತ್ತದೆ ಎಂದು ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಜಯದೇವ ವೃತ್ತದ ಬಳಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ದಾನಿಗಳ ನೆರವಿನೊಂದಿಗೆ ಹಮ್ಮಿಕೊಂಡಿದ್ದ ಒಂದು ತಿಂಗಳ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
ಹಸಿದವರಿಗೆ ಅನ್ನ ಹಾಕುವುದು ನೀರು, ಮಜ್ಜಿಗೆ ನೀಡಿ ಸಹಾಯ ಮಾಡುವವರು ಮಾತೃ ಹೃದಯಿಗಳು. ನಾವೆಲ್ಲರೂ ಸಹ ಇತರರಿಗೆ ಸಹಾಯ ಮಾಡುವ ಮೂಲಕ ಮಾತೃ ಹೃದಯಿಗಳಾಗೋಣ ಎಂದು ಆಶಿಸಿದರು.
ಇದೇ ವೇಳೆ ಸಮಾಜ ಸೇವಕರಾದ ಮಂಗಳ ಮುಖಿ ಸವಳಂಗದ ಮಂಜಮ್ಮ ಅವರನ್ನು ಗೌರವಿ ಸಲಾಯಿತು. ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್.ಬಡದಾಳ್ ಮಾತನಾಡಿದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಡಾ. ಹೆಚ್.ಎನ್.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ,ಹೆಚ್.ಆರ್. ಉದಯಕುಮಾರ್, ಬಸವರಾಜ್, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು. ದೃಷ್ಟಿ ಕಣ್ಣಿನ ಆಸ್ಪತ್ರೆಯ ಡಾ.ಎಂ.ಹೆಚ್. ರವೀಂದ್ರನಾಥ್ ಮೊದಲ ದಿನದ ಮಜ್ಜಿಗೆ ವಿತರಣೆಯ ದಾನಿಗಳಾಗಿದ್ದರು.