ದಾವಣಗೆರೆ, ಮಾ. 4 – ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‍ನ ಪೋಷಕ ಸಂಸ್ಥೆಯಾಗಿರುವ ಮಲಬಾರ್ ಗ್ರೂಪ್ ಕರ್ನಾಟಕದ ದಾವಣಗೆರೆ ಮಲಬಾರ್ ಗೋಲ್ಡ್‍ನಿಂದ ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ಇಂದು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ರೋಟರಿ ಕ್ಲಬ್ ಪ್ರಸಿಡೆಂಟ್ ಸುನಿತಾ, ಮೇಯರ್ ಚಮನ್‍ಸಾಬ್, ಎಕ್ಸ್ ಮುನ್ಸಿಪಾಲ್ ಕಾಲೇ ಜಿನ ಉಪನ್ಯಾಸಕರಾದ ದೇವಿಬಾಯಿ ಎಂ.ಯು. ಅವರುಗಳಿಂದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ದಾವಣಗೆರೆ ಶೋ ರೂಂನ ಮುಖ್ಯಸ್ಥ ಬೇಸಿಲ್ ರಾಜನ್ ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.