`ಶ್ರೀ ಗುರು ಅಜ್ಜಯ್ಯನ ಪವಾಡಗಳು’ ಪುಸ್ತಕ ಬಿಡುಗಡೆ

`ಶ್ರೀ ಗುರು ಅಜ್ಜಯ್ಯನ ಪವಾಡಗಳು’ ಪುಸ್ತಕ ಬಿಡುಗಡೆ

ಮಲೇಬೆನ್ನೂರು, ಮಾ. 3- ಉಕ್ಕಡಗಾತ್ರಿ ಗ್ರಾಮದ ಶಿಕ್ಷಕ ಕೆ.ಬಸವರಾಜ್ ಅವರು ರಚಿಸಿರುವ `ಶ್ರೀ ಗುರು ಅಜ್ಜಯ್ಯನ ಪವಾಡಗಳು’ ಎಂಬ ಪುಸ್ತಕವನ್ನು ನಂದಿಗುಡಿ ವೃಷಭಪುರಿ ಮಹಾಸಂಸ್ಥಾನ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಶುಕ್ರವಾರ ಅಜ್ಜಯ್ಯನ ದೇವಸ್ಥಾನದಲ್ಲಿ ನಡೆದ ಜಾತ್ರಾ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯ ದರ್ಶಿ ಎಸ್.ಸುರೇಶ್, ಟ್ರಸ್ಟಿಗಳಾದ ಜಿಗಳಿ ಇಂದೂಧರ್, ಪ್ರಕಾಶ್ ಕೋಟೇರ, ಗದಿಗೆಯ್ಯ ಪಾಟೀಲ್, ಆನಂದ ಪಾಟೀಲ್, ಹೆಚ್.ವೀರನಗೌಡ, ನಾಗರಾಜಪ್ಪ ದಿಲ್ಲಿವಾಲಾ, ವೀರಭದ್ರಪ್ಪ ಕೋಟೇರ, ಕರಿಬಸಪ್ಪ ಹಗರಿಬೊಮ್ಮ ನಹಳ್ಳಿ, ಶಿಕ್ಷಕ ಮಾಲತೇಶ್, ಮಹಾಂತಯ್ಯ ಚೊಗಚಿಕೊಪ್ಪ ಮತ್ತಿತರರು ಈ ವೇಳೆ ಇದ್ದರು.

error: Content is protected !!