ಸೈಕಲ್ ಚಾಲೆಂಜ್ ಸ್ಪರ್ಧೆಯಲ್ಲಿ ಕಿರಣ್ ಬಾಳೆಹೊಲದ ರಾಜ್ಯಕ್ಕೆ ದ್ವಿತೀಯ

ಸೈಕಲ್ ಚಾಲೆಂಜ್ ಸ್ಪರ್ಧೆಯಲ್ಲಿ ಕಿರಣ್ ಬಾಳೆಹೊಲದ ರಾಜ್ಯಕ್ಕೆ ದ್ವಿತೀಯ

ದಾವಣಗೆರೆ, ಮಾ.3- ನಗರದ ಕಿರಣ್ ಬಾಳೆಹೊಲದ್ ಅವರು ನೂರು ದಿನದ ಸೈಕಲ್ ಚಾಲೆಂಜ್ ಸ್ಪರ್ಧೆಯಲ್ಲಿ 6277 ಕಿ.ಮೀ ದೂರ ಕ್ರಮಿಸಿ, 31022 ಅಂಕಗಳೊಂದಿಗೆ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ.

40 ರಿಂದ 49 ವಯಸ್ಸಿನ ವಿಭಾಗದಲ್ಲಿ ಭಾಗವಹಿಸಿದ ಇವರು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕುಂದುವಾಡದ ಆರಾಧ್ಯ ಅತಿಥಿ ಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ್ ಬಾಳೆಹೊಲದ, ಡಾ.ಕೆ.ಎಸ್‌. ನವೀನ್ ಮತ್ತು ಮಹೇಶ್ ಅವರಿಗೆ ಬೈಸಿಕಲ್ ಕ್ಲಬ್‌ ವತಿಯಿಂದ ಸನ್ಮಾನಿಸಲಾಗಿದೆ.

ಈ ವೇಳೆ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ರಾಜೇಂದ್ರ ಪ್ರಸಾದ್, ಕೆ.ಎಸ್. ಮಹೇಶ್, ಡಾ. ಮಾಲತೇಶ್, ಸಿ.ಹೆಚ್‌. ದೇವರಾಜ್ ಇತರರು ಇದ್ದರು.

error: Content is protected !!