ದಾವಣಗೆರೆ, ಮಾ. 2- ಮಹಾಶಿವರಾತ್ರಿಯ ಮರುದಿನ ನಗರದ ಎಸ್‌ಕೆಪಿ ರಸ್ತೆಯಲ್ಲಿ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದಿಂದ ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಬೆಳ್ಳಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ದೇವಸ್ಥಾನದ ಎದುರಿನಿಂದ ಆರಂಭವಾದ ಬೆಳ್ಳಿ ರಥೋತ್ಸವವು, ರಾಜ ಬೀದಿಗಳಲ್ಲಿ ಸಂಚರಿಸಿ, ಮರಳಿ ದೇವಸ್ಥಾನಕ್ಕೆ ಆಗಮಿಸಿತು. ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬೊಮ್ಮ ತಿಪ್ಪೇಸ್ವಾಮಿ (ಎಸ್‌ಟಿಪಿ), ಸತ್ಯನಾರಾಯಣ ಶೇಪೂರ್, ನಿಂಗಪ್ಪ ಅರಣಿ, ಬಿ.ಎಸ್.ಕೆ. ಪರಶುರಾಮ್, ಟಿ.ಎಸ್. ರವಿಕುಮಾರ್, ಮಂಜುನಾಥ್, ಸಂಗಪ್ಪ, ನಂದಿಗಾವಿ ಪರಶುರಾಮ್ ಮತ್ತಿತರರಿದ್ದರು.
ನಗರದಲ್ಲಿ ಸಂಭ್ರಮದ ಮಾರ್ಕಂಡೇಶ್ವರ ಸ್ವಾಮಿ ಬೆಳ್ಳಿ ರಥೋತ್ಸವ
