ವಿಜಯನಗರ, ಮಾ. 2 – ಗತಕಾಲದ ವೈಭವವನ್ನು ಮರು ಜೀವಿಸುವ ಕಾರ್ಯಕ್ರಮ `ಹಂಪಿ ಉತ್ಸವ-2025’ದಲ್ಲಿ ದಾವಣಗೆರೆಯ ಸಾಂಸ್ಕೃತಿಕ ಸಂಸ್ಥೆ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆದ್ದಿತು.
ಡಿವಿಜಿಯವರ ಅಂತಃಪುರ ಗೀತೆಗಳ ನಟನವಾಡಿದಳ್‌ಗೆ ನೃತ್ಯ ಸಂಯೋಜಿಸ ಲಾಗಿತ್ತು. ಶಾಸ್ತ್ರೀಯ ಹಾಗು ಸಮಕಾಲೀನ ನೃತ್ಯ ಶೈಲಿಯಲ್ಲಿ `ಬಾರಿಸು ಕನ್ನಡ ಡಿಂಡಿ ಮವ’ ಗೀತೆಗೆ ನೃತ್ಯ ಪ್ರದರ್ಶಿಸಲಾಯಿತು.
ಎಸ್. ಸುಚೇತ , ತನುಜ ಜಿ.ಸಿ. ಸೃಷ್ಟಿ ಪಾಟೀಲ್, ಎಂ. ಖುಷಿ, ಜಿ. ಸಮೀಕ್ಷಾ, ಜಿ.ಆರ್. ಸಾನಿಕ, ಆರ್.ಎಂ. ವೈಷ್ಣವಿ, ಕೆ. ಖುಷಿ, ಎಚ್. ಶ್ರೇಯಾ, ಶಾನ್ವಿಕಾ, ಎಮ್.ಆದ್ಯ ಒಳಗೊಂಡ ಚಿರಂತನ ತಂಡವು ಯಶಸ್ವಿಯಾಗಿ ನೃತ್ಯ ಪ್ರದರ್ಶನ ನಡೆಸಿಕೊಟ್ಟಿತು.