ದಾವಣಗೆರೆ, ಮಾ. 2 – ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಟದ ಮಾಜಿ ಸಂಚಾಲಕರೂ, ವಕೀಲರೂ ಆದ ಎಸ್. ಎಸ್. ಮಿಟ್ಟಲಕೋಡ್ ಅವರು ಆಯ್ಕೆಯಾಗಿದ್ದಾರೆ.
ಮಿಟ್ಟಲಕೋಡ್ ಅವರನ್ನು ಅಭಿನಂದಿಸಿ, ಜಿಲ್ಲಾ ವಕೀಲರ ಸಂಘದ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹೆಚ್. ದಿವಾಕರ್, ಸಹಕಾರ ಸಂಘದ ನಿರ್ದೇಶಕ ಎ.ಸಿ. ರಾಘವೇಂದ್ರ, ಅಧಿವಕ್ತ ಪರಿಷತ್ತಿನ ಅಧ್ಯಕ್ಷ ಎಲ್. ದಯಾನಂದ, ಮನೋಜ್ ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ವೆಂಕಟೇಶ್, ಪಿ.ವಿ. ಶಿವಕುಮಾರ್, ರಾಘವೇಂದ್ರ ಶೆಟ್ಟಿ, ನಾಗರಾಜ್ ನಾಯ್ಕ, ಮೇಘರಾಜ, ಸಿದ್ದಪ್ಪ ಇನ್ನು ಮುಂತಾದ ವಕೀಲರು ಹಾಜರಿದ್ದರು.