ಕ್ಷಯ ರೋಗವನ್ನು ಶೀಘ್ರ ಚಿಕಿತ್ಸೆಯಿಂದ ನಿರ್ಮೂಲನೆ ಮಾಡಬಹುದು

ಕ್ಷಯ ರೋಗವನ್ನು ಶೀಘ್ರ ಚಿಕಿತ್ಸೆಯಿಂದ ನಿರ್ಮೂಲನೆ ಮಾಡಬಹುದು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ

ದಾವಣಗೆರೆ, ಮಾ. 2- ಕ್ಷಯ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಿ ಶೀಘ್ರ ಚಿಕಿತ್ಸೆ ನೀಡುವ ಮೂಲಕ ನಿರ್ಮೂಲನೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ತಿಳಿಸಿದರು.

ನೂರು ದಿನದ ಟಿಬಿ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಗಳ ಕಛೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ ಹಾಗೂ ಸೂಯೇಜ್ ಫೌಂಡೇಷನ್ ಇಂಡಿಯಾ ವತಿಯಿಂದ ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನ ದಡಿಯಲ್ಲಿ ಕ್ಷಯ ರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

ನಿಕ್ಷಯ ಮಿತ್ರ ಕಾರ್ಯಕ್ರಮ ಯೋಜನೆಯಲ್ಲಿ ಸಮುದಾಯದ ಎಲ್ಲಾ ವರ್ಗದವರು ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಅಥವಾ ಇನ್ನಿತರೆ ಸಹಾಯ ನೀಡಲು ಮುಂದಾಗುವ ಮೂಲಕ ಸಾರ್ವಜನಿಕ ಸಹಭಾಗಿತ್ವವನ್ನು ಬಯಸಲಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸೂಯೇಜ್ ಫೌಂಡೇಷನ್ ಇಂಡಿಯಾ ವತಿಯಿಂದ ಉಚಿತ ಪೌಷ್ಟಿಕ ಆಹಾರ ಕಿಟ್‌ಗಳನ್ನು ನೀಡುತ್ತಿರುವುದು ಪ್ರಶಂಸನೀಯ ವಿಷಯ ಎಂದರು. ಇದೇ ರೀತಿ ಈಗಾಗಲೇ ಜೆಎಸ್‌ಡಬ್ಲ್ಯು ಕಂಪನಿಯು ಸಹ ಪೌಷ್ಠಿಕ ಆಹಾರ ಕಿಟ್‌ ನೀಡಿರುತ್ತದೆ ಎಂದು ತಿಳಿಸಿ, ಶೀಘ್ರವಾಗಿ ಕ್ಷಯ ರೋಗ ಪ್ರಕರಣ ಪತ್ತೆ ಹಚ್ಚುವುದು, ಚಿಕಿತ್ಸೆ ದೊರಕಿಸುವುದು ಗುಣ ಮುಖರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಡಾ. ಷಣ್ಮುಖಪ್ಪ ತಿಳಿಸಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಾತನಾಡಿ, ಈ ಆಂದೋಲನವು ಎಲ್ಲರ ಸಹಕಾರದಿಂದ 889 ದಿನ ಪೂರೈಸಿದೆ ಎಂದು ಹೇಳಿದರು.

ಸೂಯೇಜ್ ಫೌಂಡೇಷನ್ ಇಂಡಿಯಾ ವತಿಯಿಂದ ಆಗಮಿಸಿದ್ದ ಮುಖ್ಯಸ್ಥರಾದ  ಸೋಮ ಶೇಖರ, ರಾಜೇಶ್, ಎಂ. ಕಿರಣ್, ಉಮಾ ಮಹೇಶ್‌ರಾವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!