ದಾವಣಗೆರೆ, ಮಾ. 2 – 23ನೇ ವಾರ್ಡ್‌ನ ಎಂ.ಸಿ.ಸಿ. ಎ ಬ್ಲಾಕ್ ಬಕ್ಕೇಶ್ವರ ಹೈಸ್ಕೂಲ್ ಹತ್ತಿರದ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನಡೆದ ಭಕ್ತಿ ಗಾನ ಸುಧೆ ರಸಮಂಜರಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಮರ್ಥ್ ಶಿವರಾತ್ರಿಯ ಶುಭಾಶಯ ಹೇಳಿದರು. ಮಾಜಿ ಉಪ ಮಹಾಪೌರ ಸೋಗಿ ಶಾಂತಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಾಗರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವರ್ತಕ ಮಾಗಾನಹಳ್ಳಿ ಗಿರೀಶ್ ಪ್ರಾಯೋಜಿಸಿದ್ದರು. ಪ್ರಸನ್ನಕುಮಾರ್, ಹರೀಶ್, ಹನುಮಂತು, ಮಾಗಾನಹಳ್ಳಿ ಯುವರಾಜ್, ಗಿರೀಶ್, ಸಮೀರ್, ಅಭಿಷೇಕ್, ರಂಜಿತ್, ಸಂತೋಷ್, ಹಾಲೇಶ್, ಪವನ, ಕಿರಣ್, ಅರವಿಂದ್, ನಿಧಿರಾಜ್, ವಿನಾಯಕ ಮತ್ತು ಇತರರು ಭಾಗವಹಿಸಿದ್ದರು.