ದಾವಣಗೆರೆ, ಮಾ. 2- ನಗರದ ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಎಂ.ವಿ. ಜಯಪ್ರಕಾಶ್ ಮಾಗಿ ಅವರ ಸ್ನೇಹ ಬಳಗದಿಂದ ಶ್ರೀ ಕುರುವತ್ತಿ ಬಸವೇಶ್ವರ ರಥೋತ್ಸವಕ್ಕೆ ಪಾದಯಾತ್ರೆ ಹೋಗುವ ಭಕ್ತಾದಿಗಳಿಗೆ ಕೊಂಡಜ್ಜಿಯಲ್ಲಿ 11ನೇ ವರ್ಷದ ಪ್ರಸಾದ ಮತ್ತು ಹಣ್ಣು, ನೀರು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯಪ್ರಕಾಶ್ ಮಾಗಿ ಹಾಗೂ ಚೌಕಿಪೇಟೆ ಅಕ್ಕಿ ವರ್ತಕರು ಹಾಗೂ ಗುಜರಿ ಲೈನ್ ಅಕ್ಕಿ ನುಚ್ಚು ವರ್ತಕರು ಹಾಗೂ ರೈಸ್ ಬ್ರೋಕರ್‌ಗಳು ಮತ್ತು ಸ್ನೇಹ ಬಳಗದವರು ಉಪಸ್ಥಿತರಿದ್ದರು.