ಜಗದ್ಗುರು ಗುರುಪಾದ ಮುರುಘಾ ಮಹಾಸ್ವಾಮೀಜಿ ರಥೋತ್ಸವ

ಜಗದ್ಗುರು ಗುರುಪಾದ ಮುರುಘಾ ಮಹಾಸ್ವಾಮೀಜಿ ರಥೋತ್ಸವ

ಚಿತ್ರದುರ್ಗ, ಫೆ. 28 – ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವವು ನಗರಕ್ಕೆ ಸಮೀಪದ ಸಿಬಾರದಲ್ಲಿ ನಿನ್ನೆ ಸಂಭ್ರಮದಿಂದ ಜರುಗಿತು.

ಈ ಬಾರಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ವರ್ಷದ ಜಯಂತ್ಯೋ ತ್ಸವವೂ ಬಂದಿರುವ ಕಾರಣ  ಅವರ ಹೆಸರಿನಲ್ಲಿಯೂ ಸೇರಿದಂತೆ ನಿನ್ನೆ ಜಾತ್ರೆಗೆ ಚಾಲನೆ ನೀಡಲಾಯಿತು. ಬಸವೇಶ್ವರರು ಹಾಗೂ ಶ್ರೀ ಗುರುಪಾದ ಮುರುಘ ರಾಜೇಂದ್ರ ಮಹಾಸ್ವಾಮಿಗಳವರ ಭಾವಚಿತ್ರವನ್ನು ಅಲಂಕೃತಗೊಂಡ ಟ್ರ್ಯಾಕ್ಟರ್‍ನಲ್ಲಿ ಶ್ರೀಮಠದಿಂದ ಜಾತ್ರೆಗೆ ತೆಗೆದುಕೊಂಡು ಹೋಗಿ ಅದರೊಂದಿಗೆ ಮೈಲಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಪೂಜಾ ವಿಧಾನಗಳನ್ನು ವಚನಗಳ ಮೂಲಕ ನೆರವೇರಿಸಿ  ಸಾವಿರಾರು ಜನರ  ಹರ್ಷೋದ್ಘಾರದ  ನಡುವೆ ರಥೋತ್ಸವಕ್ಕೆ ಚಾಲನೆ ನೀಡಿ ರಥವನ್ನು ಎಳೆಯಲಾಯಿತು.

ಈ ಸಂದರ್ಭದಲ್ಲಿ ಬೃಹನ್ಮಠದ  ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಮಹಾ ಸ್ವಾಮಿಗಳು ಹಾಗೂ ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಚಾಲನೆ ನೀಡಿ ರಥೋತ್ಸವದೊಂದಿಗೆ ಹೆಜ್ಜೆ ಹಾಕಿದರು.

ದನಗಳ ಜಾತ್ರೆ : ರಥೋತ್ಸವ ಪ್ರಾರಂಭದೊಂದಿಗೆ ದನಗಳ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ದೊರಕಿತು. ಮಧ್ಯ ಕರ್ನಾಟಕದ ಈ ಭಾಗದ ಜನಪ್ರಿಯ ದನಗಳ ಜಾತ್ರೆಗೆ ವಿಶೇಷ ಮೆರಗು ಇದೆ. 

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಜಿ.ಎಂ. ಪ್ರಕಾಶ್, ಜಿ.ಎಂ. ಕುಮಾರ್, ಚಿದಾನಂದ ಮೂರ್ತಿ, ಜಿ.ಎಂ. ಸತೀಶ್, ಗೌಡರ ಜಯದೇವಪ್ಪ, ಜಿ.ಎಂ. ತಿಪ್ಪೇಸ್ವಾಮಿ, ಜಿ.ಎಂ. ಶಿವಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಶಂಕರಮ್ಮ,  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ  ನರಸಿಂಹರಾಜು, ಜಿ.ಎಂ. ಶಿವಲಿಂಗಪ್ಪ, ಜಿ.ಎಂ. ಪುಟ್ಟಸ್ವಾಮಿ, ಜಂಬುನಾಥ್ ಸೇರಿದಂತೆ  ಇತರರು ಭಾಗವಹಿಸಿದ್ದರು.

error: Content is protected !!