ದಾವಣಗೆರೆ, ಫೆ. 26- ಶರಣ ಸಾಹಿತ್ಯ ಪರಿಷತ್ತಿನ ಕದಳಿ ಮಹಿಳಾ ವೇದಿಕೆಯ 162 ನೇ ಕದಳಿ ಕಮ್ಮಟದಲ್ಲಿ ದತ್ತಿ ಉಪನ್ಯಾಸ, ವಚನ ದಾಸೋಹ ಮತ್ತು ಶರಣ ಕಿನ್ನರಿ ಬೊಮ್ಮಯ್ಯನವರ ಶರಣೋತ್ಸವವನ್ನು ನಗರದ ಬಿ.ಇ.ಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿನ್ನೆ ಆಚರಿಸಲಾಯಿತು.
ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಶರಣೆ ಮಮತಾ ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಿ.ಇ.ಎ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನೀತಾ ಎ.ಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯ ಡಾ. ಆಲೂರು ಮಂಜುನಾಥ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಲಿಂ. ಸುನಂದಮ್ಮ ಸಿ. ಆಲೂರು ಲಿಂಗೈಕ್ಯ ಚಂದ್ರಶೇಖರಪ್ಪ ಆಲೂರು ಇವರ ದತ್ತಿ ಕಾರ್ಯಕ್ರಮ ನಡೆಸಲಾಯಿತು.
ದತ್ತಿ ದಾಸೋಹಿಗಳು ಸುಜಾತ ರವೀಂದ್ರ ಡಾ. ಕೆ. ರವೀಂದ್ರ, ದಾಸೋಹಿಗಳಾದ ಸುಜಾತ ರವೀಂದ್ರ ಉಪಸ್ಥಿತರಿದ್ದರು. ಸುನಂದಮ್ಮ ಸಿ. ಆಲೂರು ಮತ್ತು ಚಂದ್ರಶೇಖರಪ್ಪ ಆಲೂರು ಅವರ ಕುಟುಂಬ ವರ್ಗದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದ ಶರಣ ಡಾಕ್ಟರ್ ಮಹಾಂತೇಶ್ ಪಾಟೀಲ್, `ವಚನಗಳು- ಶಿಕ್ಷಣದ ಇನ್ನೊಂದು ಪರಿಭಾಷೆ’ ಎಂಬ ವಿಷಯದ ಬಗ್ಗೆ ದತ್ತಿ ಅನುಭಾವವನ್ನು ನೀಡಿದರು. ಶೈಕ್ಷಣಿಕವಾಗಿ ವಚನಗಳು ತಮ್ಮನ್ನು ಯಾವ ರೀತಿಯಲ್ಲಿ ಉತ್ಕೃಷ್ಟ ಮಟ್ಟಕ್ಕೆ ಏರಿಸುತ್ತವೆ ಎಂಬುದರ ಬಗ್ಗೆ ತಿಳಿಸಿದರು.
ಕದಳಿ ಮಹಿಳಾ ವೇದಿಕೆಯ ರಾಜ್ಯ ಉಪ ಸಂಚಾಲಕರಾದ ಪ್ರಮೀಳಾ ನಟರಾಜ್ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್ ಉಪಸ್ಥಿತರಿದ್ದರು. ನಿರ್ಮಲ ಶಿವಕುಮಾರ್, ವಿಜಯ ಚಂದ್ರಶೇಖರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಸಂತ ಕೆ.ಆರ್. ನೀರೂಪಿಸಿದರು. ನಂದಿನಿ ಗಂಗಾಧರ್ ಸ್ವಾಗತಿಸಿದರು. ಸೌಮ್ಯ ಸತೀಶ್ ಅತಿಥಿಗಳನ್ನು ಪರಿಚಯಿಸಿದರು. ಪೂರ್ಣಿಮಾ ಪ್ರಸನ್ನ ದತ್ತಿ ದಾಸೋಹಿಗಳನ್ನು ಸಭೆಗೆ ಪರಿಚಯಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ನಂದಿನಿ ಗಂಗಾಧರ ಸ್ವಾಗತಿಸಿದರು. ಸೌಮ್ಯ ಸತೀಶ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.