ಮಲೇಬೆನ್ನೂರು, ಫೆ.25- ಮಕ್ಕಳ ಕಲಿಕೆಗೆ ಭದ್ರಬುನಾದಿ ಹಾಗೂ ಮಕ್ಕಳ ಅಭಿವೃದ್ಧಿಯ ಮುನ್ನುಡಿ ಈ ಕಲಿಕಾ ಹಬ್ಬವಾಗಿದೆ ಎಂದು ಗೋವಿನಹಾಳ್ ಗ್ರಾಮದ ಹಿರಿಯ ಮುಖಂಡ ಜಿ.ಮಲ್ಲನಗೌಡ್ರು ಹೇಳಿದರು.
ಗೋವಿನಹಾಳ್ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೊಕ್ಕನೂರು ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ `ಕಲಿಕಾ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗವಾಗಬೇಕೆಂದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ವಿಶೇಷ ಸಾಮರ್ಥ್ಯವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸೋಣ ಎಂದರು.
ಕಾರ್ಯಕ್ರಮದ ಆರಂಭಕ್ಕೂ ಮೊದಲಿಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಡೊಳ್ಳು, ಬ್ಯಾಂಡ್, ವಾದ್ಯಗಳು ಹಾಗೂ ಕುಂಭಮೇಳದೊಂದಿಗೆ ಚಕ್ಕಡಿ ಗಾಡಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಛದ್ಮ ವೇಷ ಒಳಗೊಂಡಂತೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮವನ್ನು ಸಾಂಪ್ರದಾಯಿಕ ದೀಪ ಬೆಳಗಿಸಿ, ಮಣಿಗಳನ್ನು ಚದುರಿಸಿ ಕಲಿಕಾ ಹಬ್ಬ ಎಂದು ಪ್ರದರ್ಶಿಸಿ, ಕಲಿಕಾ ಹಬ್ಬದ ವಿಶೇಷ ಬ್ಯಾನರ್ ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ, ಉಪಾಧ್ಯಕ್ಷ ಕರಿಬಸಪ್ಪ ಕುಪ್ಪೇಲೂರು, ನಿರ್ದೇಶಕರಾದ ಶ್ರೀಮತಿ ಸುಮಂಗಲ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ದೇವೇಂದ್ರಪ್ಪ, ಶಾಲೆಯ ಮುಖ್ಯ ಶಿಕ್ಷಕ ಸಿದ್ದಪ್ಪ ಸಂಗಣ್ಣನವರ್, ತಾಲ್ಲೂಕು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆರ್.ಆರ್.ಮಠ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಟಿ.ಮಂಜಪ್ಪ, ಕಾರ್ಯದರ್ಶಿ ತಿಪ್ಪೇಶ್ ರೆಡ್ಡಿ, ಖಜಾಂಚಿ ಬಸವನಗೌಡ, ಇಸಿಒಗಳಾದ ತೀರ್ಥಪ್ಪ, ಹರೀಶ್ ನೋಟಗಾರ್, ಹೆಚ್.ಬಿ.ಬಸವರಾಜ್, ಅಶೋಕ್ ಕುಮಾರ್ ಹಾಗೂ ಬಿ.ಆರ್.ಪಿ ಗಳಾದ ವೀರಪ್ಪ, ಭಾಗ್ಯಲಕ್ಷ್ಮಿ, ಸಿ.ಕೆ.ಮಹೇಶ್, ಸಿ.ಆರ್.ಪಿ ಗಳಾದ ಕೆ.ಬಸವರಾಜಯ್ಯ, ಎಂ.ಎಸ್.ರಮೇಶ್, ಸಿ.ನಂಜುಂಡಪ್ಪ, ಚನ್ನಕೇಶವ ಕಟ್ಟಿ, ಶಿವಪ್ಪ ಬಡಿಗೇರ್, ರೂಪ, ಚನ್ನಮ್ಮ ತಡಕನಹಳ್ಳಿ, ಸುನಿತಾ, ಶಿಕ್ಷಕರುಗಳಾದ ಗೋವಿಂದಪ್ಪ, ಅಮಿತ್, ನಿಜಾಮುದ್ದೀನ್, ಪ್ರಭು ಪ್ರಸಾದ್, ದಿವಾಕರ್, ಕರಿಬಸಪ್ಪ, ತಿಮ್ಮರಾಜ್, ದೇವರಾಜ್, ಶಾಂತರಾಜ್, ಬಸವರಾಜ್, ಮಂಜಣ್ಣ, ರಾಜಪ್ಪ, ಶಾಲೆಯ ಸಿಬ್ಬಂದಿ ವರ್ಗದವರಾದ ಗೋಣಿ ರಾಮಪ್ಪ, ಗಜರಾಜ, ನಾಯಕ್, ಅಂಜಿನಪ್ಪ ಹಾಗೂ ಪೋಷಕರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಸಿದ್ದಪ್ಪ ಸಂಗಣ್ಣನವರ್ ಸ್ವಾಗತಿಸಿದರು. ಶಾಲಾ ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು.