ಹರಿಹರದಲ್ಲಿ ಇಂದು ಮಹಾರುದ್ರಾಭಿಷೇಕ, ಸಪ್ತ ದೇವತೆಗಳಿಗೆ ಪಂಚಾಮೃತ ಅಭಿಷೇಕ

ಹರಿಹರದಲ್ಲಿ ಇಂದು ಮಹಾರುದ್ರಾಭಿಷೇಕ, ಸಪ್ತ ದೇವತೆಗಳಿಗೆ ಪಂಚಾಮೃತ ಅಭಿಷೇಕ

ಭರಂಪುರ 108 ಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಮಹಾರುದ್ರಾಭಿಷೇಕ ಹಾಗೂ ಸಪ್ತ ದೇವತೆಗಳ ಪಂಚಾಮೃತ ಅಭಿಷೇಕ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ಹಾಗೂ 108 ಲಿಂಗೇಶ್ವರ ಕಮಿಟಿ ತಿಳಿಸಿದೆ.

ಶ್ರೀ ಡಾ. ಶರಣ ಬಸವಲಿಂಗ ಶಿವಯೋಗಿಗಳವರ ನೇತೃತ್ವದಲ್ಲಿ  ಇಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12  ರವರೆಗೆ ಮಹಾರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಬಿಲ್ವಾರ್ಚನೆ, ಭಸ್ಮಾರ್ಚನೆ ನಡೆಯುತ್ತದೆ.

ನಂತರ ಭಕ್ತರಿಗೆ ದೇವರ ದರ್ಶನದ ಮೂಲಕ ಮಹಾಶಿವರಾತ್ರಿಯ ಜಾಗರಣೆ ಆಚರಣೆ ಮಾಡಲಾಗುವುದು. ಪ್ರಸಾದ ವ್ಯವಸ್ಥೆ ಮಾಡಲಾಗಿದೆ. 

ಇದೇ ವೇಳೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆ ಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿದ ಪತ್ರಕರ್ತ ರಾದ ಶೇಖರಗೌಡ ಪಾಟೀಲ್, ಪ್ರವೀಣ್ ಹನಗವಾಡಿ ಅವರು ತ್ರಿವೇಣಿ ಸಂಗಮದ ಗಂಗಾ, ಯಮುನಾ, ಸರಸ್ವತಿ ನದಿಯ ಜಲವನ್ನು ಶ್ರೀ 108 ಲಿಂಗೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕಕ್ಕೆ ಡಾ. ಶರಣ ಬಸವಲಿಂಗ ಶಿವಯೋಗಿಗಳು ಮತ್ತು ದೇವಸ್ಥಾನ ಸಮಿತಿಯ ಮುಖಂಡರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.

ಈ ವೇಳೆ ದೇವಸ್ಥಾನ ಸಮಿತಿಯ ಖಜಾಂಚಿ ಬೆಣ್ಣೆ ಸಿದ್ದೇಶ್, ಸದಸ್ಯರಾದ ಗಜೇಂದ್ರ, ಮಾಕನೂರು ರೇವಣಸಿದ್ದಪ್ಪ, ಕೊಟ್ರೇಶಪ್ಪ ಹಾದಿಮನಿ, ಚಂದ್ರಪ್ಪ ಮಜೀಗಿ, ಭೇಟಪ್ಪ, ದಯಾನಂದ, ಭೀಮ್‌ಸೇನ್, ಸೇರಿದಂತೆ ಇತರರಿದ್ದರು.

error: Content is protected !!