ನಗರದ ಜಾಲಿನಗರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿಂದು – ನಾಳೆ ಶಿವರಾತ್ರಿ

ನಗರದ ಜಾಲಿನಗರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿಂದು – ನಾಳೆ ಶಿವರಾತ್ರಿ

ಹಳೆಜಾಲಿನಗರ, 1ನೇ ಮೇನ್, 2ನೇ ಕ್ರಾಸ್‌ನಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ ಮಠದಲ್ಲಿ ಇಂದು ಬೆಳಿಗ್ಗೆ 5 ಗಂಟೆಗೆ ಶ್ರೀ ಸ್ವಾಮಿಗೆ ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ, ನವಗ್ರಹ ಪೂಜೆ, ಬಿಲ್ವಾರ್ಚನೆ, ಮುತ್ತೈದೆಯರಿಗೆ ಉಡಿ ತುಂಬುವುದು ಹಾಗೂ ಗಂಗಾಪೂಜೆ ಇರುತ್ತದೆ. ಸಂಜೆ 6 ಗಂಟೆಯಿಂದ ಜಾಗರಣೆ ಇದೆ. 

ನಾಳೆ ಗುರುವಾರ ಮಧ್ಯಾಹ್ನ 12.30 ಗಂಟೆಗೆ ಆನ್ನ ಸಂತರ್ಪಣೆ ಇರುತ್ತದೆ. ಸಕಲ ಭಕ್ತಾದಿಗಳು, ಅನ್ನ ಸಂತರ್ಪಣೆಗೆ ಅಕ್ಕಿ, ಬೆಲ್ಲ, ಗೋಧಿ ನುಚ್ಚು, ಬೇಳೆ, ಇನ್ನಿತರೆ ದವಸ-ಧಾನ್ಯಗಳನ್ನು ನೀಡಬೇಕೆಂದು ಮಠದ ಪುರೋಹಿತ ವಿ.ಜಿ. ಗಿರೀಶ್ ಸ್ವಾಮಿಗಳು (99456 24512) ಕೋರಿದ್ದಾರೆ.

error: Content is protected !!