ನಿಟ್ಟೂರಿಗೆ ಆದಿಚುಂಚನಗಿರಿ ಸ್ವಾಮೀಜಿ ಭೇಟಿ

ನಿಟ್ಟೂರಿಗೆ ಆದಿಚುಂಚನಗಿರಿ ಸ್ವಾಮೀಜಿ ಭೇಟಿ

ಮಲೇಬೆನ್ನೂರು, ಫೆ.24- ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸೋಮವಾರ ನಿಟ್ಟೂರು ಗ್ರಾಮಕ್ಕೆ ಆಗಮಿಸಿದ್ದ ವೇಳೆ ಗ್ರಾಮಸ್ಥರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ಗ್ರಾಮದ ಅತಿದೊಡ್ಡ ಅವಿಭಕ್ತ ಕುಟುಂಬ ಎಂಬ ಹೆಗ್ಗಳಿಕೆ ಪಡೆದಿದ್ದ ಕೆ.ರಾಮಪ್ಪ ಮತ್ತು ಕೆ.ಸಂಜೀವ ಮೂರ್ತಿ ಅವರ ಮನೆಗಳಿಗೆ ಶ್ರೀಗಳು ಸೌಹಾರ್ದ ಭೇಟಿ ನೀಡಿದ್ದ ವೇಳೆ, ಕಳೆದ 15 ವರ್ಷಗಳಿಂದ ಆದಿಚುಂಚನ ಗಿರಿ ಗೋಶಾಲೆಗೆ  ಉಚಿತವಾಗಿ ಪ್ರತಿ ಬೆಳೆಯ ಹುಲ್ಲು ನೀಡುತ್ತಿರುವ ನಿಟ್ಟೂರು, ಜಿಗಳಿ, ಕುಂಬಳೂರು ಮತ್ತು ವಿನಾಯಕ ನಗರ ಕ್ಯಾಂಪಿನ ದಾನಿಗಳನ್ನು ಅಭಿನಂದಿಸಿ, ಅವರ ಸೇವೆಯನ್ನು ಕೊಂಡಾಡಿದರು.

ಚಿತ್ರದುರ್ಗದ ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಿಟ್ಟೂರು ಗ್ರಾಮದ ಮುಖಂಡರಾದ ಕೆ.ರಾಮಪ್ಪ, ಕೆ.ಸಂಜೀವಮೂರ್ತಿ, ಕೆ.ಏಕಾಂತಪ್ಪ, ಎನ್.ಜಿ.ಬಸವನಗೌಡ್ರು, ಇ.ಎಂ.ಮರುಳಸಿದ್ದೇಶ್, ಬಿ.ಜಿ.ಧನಂಜಯ್, ಎಸ್.ಜಿ.ಪ್ರಭುದೇವ್, ಅಬ್ಬಾರಾವ್, ಎ.ಅಂಜಿನಪ್ಪ, ಕೆ.ತಿಪ್ಪೇಶ್, ಹರಳಹಳ್ಳಿಯ ಕೃಷ್ಣಪ್ಪ, ಕುಂಬಳೂರಿನ ಬಿ.ಶಂಭುಲಿಂಗಪ್ಪ, ಜಿಗಳಿಯ ಬಿ.ಎಂ.ದೇವೇಂದ್ರಪ್ಪ, ಮುದ್ದಪ್ಳ ಮಂಜುನಾಥ್, ಪತ್ರಕರ್ತ ಪ್ರಕಾಶ್, ಮಲೇಬೆನ್ನೂರಿನ ಪಿ.ಹೆಚ್.ಶಿವಕುಮಾರ್, ಪೂಜಾರ್ ಮಹೇಶ್ ಸೇರಿದಂತೆ ಇನ್ನೂ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!